ಮಹಿಳೆಯೊಬ್ಬರು ಅಂತ್ಯಕ್ರಿಯೆಗೆ ಕೆಲವೇ ಕ್ಷಣಗಳ ಮೊದಲು ಶವಪೆಟ್ಟಿಗೆಯಲ್ಲಿ ಎಚ್ಚರಗೊಂಡಿದ್ದಾರೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆ ಇಂತಹ ಅನೇಕ ಘಟನೆಗಳು ನಡೆದಿದೆ.ಪಿಕಪ್ ಟ್ರಕ್‌ನ ಹಿಂಭಾಗದಲ್ಲಿ ಇರಿಸಲಾದ ಬಿಳಿ ಶವಪೆಟ್ಟಿಗೆಯಲ್ಲಿ ಮಹಿಳೆ ಮಲಗಿರುವ ವೀಡಿಯೊವನ್ನು ದೇವಾಲಯವು ತನ್ನ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದೆ. ಈ ದೃಶ್ಯದಲ್ಲಿ ಮಹಿಳೆಯ ತೋಳುಗಳು ಮತ್ತು ತಲೆ ಸ್ವಲ್ಪ ಅಲುಗಾಡಿದೆ. ಈ ವೇಳೆ ಅಲ್ಲಿದ್ದ ಸಿಬ್ಬಂದಿಗಳು ಗಾಬರಿಗೊಂಡಿದ್ದಾರೆ.
ದೇವಾಲಯದ ಹಣಕಾಸು ವ್ಯವಹಾರಗಳ ವ್ಯವಸ್ಥಾಪಕ ಪೈರತ್ ಸೂದ್‌ಥೂಪ್ ಸೋಮವಾರ ಎಪಿ ನೀಡಿದ ಮಾಹಿತಿ ಪ್ರಕಾರ, “ಅರವತ್ತೈದು ವರ್ಷದ ಮಹಿಳೆಯನ್ನು ಆಕೆಯ ಸಹೋದರ ಫಿಟ್ಸಾನುಲೋಕ್ ಪ್ರಾಂತ್ಯದಿಂದ ಅಂತ್ಯಕ್ರಿಯೆಗಾಗಿ ಕರೆತಂದಿದ್ದಾರೆ. ಸಿಬ್ಬಂದಿಗಳು ಅಂತ್ಯಕ್ರಿಯೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದ ವೇಳೆ ಶವಪೆಟ್ಟಿಗೆಯಿಂದ ಶಬ್ದ ಬಂದಿದೆ. ನನಗೆ ಸ್ವಲ್ಪ ಆಶ್ಚರ್ಯವಾಯಿತು, ಶವಪೆಟ್ಟಿಗೆಯನ್ನು ತೆರೆಯಲು ಹೇಳಿದೆ. ಶವಪೆಟ್ಟಿಗೆ ತೆರೆದಾಗ ಅಲ್ಲಿ ಮಹಿಳೆ ಪೆಟ್ಟಿಗೆಗೆ ಬಡಿಯುವುದು ಕಂಡಿದೆ” ಎಂದು ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

