ವಿವಾದಗಳ ನಡುವೆ ಇಬ್ಬರೂ ತಮ್ಮ ಬಯೋದಲ್ಲಿ ‘ಎವಿಲ್ ಐ ಎಮೋಜಿ ಬಳಸಿರುವುದು ನಾನಾ ರೀತಿಯ ಊಹಾಪೋಹಗಳಿಗೆ ಕಾರಣವಾಗಿದೆ.ನವೆಂಬರ್ 23, 2025ಕ್ಕೆ ಇವರ ವಿವಾಹ ನಿಗದಿಯಾಗಿತ್ತು. ಆದರೆ ಅದೇ ದಿನ ಸ್ಮೃತಿಯ ತಂದೆಗೆ ಅಸ್ವಸ್ಥತೆ ಕಾಣಿಸಿಕೊಂಡಿದ್ದರಿಂದ ತೀವ್ರವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಹೊರಬಂದಿತ್ತು. ಈ ಕಾರಣದಿಂದ ಮದುವೆ ಮುಂದೂಡಲಾಗಿದೆ ಎಂದು ಹೇಳಲಾಗಿತ್ತು. ಆದರೆ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ರೀತಿಯ ಆರೋಪಗಳು ಹರಿದಾಡತೊಡಗಿದವು. ಕೆಲವು ಬಳಕೆದಾರರು ಪಲಾಶ್ ಅವರು ಮದುವೆಗೆ ಮುನ್ನ ನೃತ್ಯ ಸಂಯೋಜಕಿಯೊಂದಿಗೆ ಚೀಟ್ ಮಾಡಿದ್ದರು ಎನ್ನಲಾಗುವ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದು, ಇದರಿಂದ ವಿವಾದ ಇನ್ನಷ್ಟು ಉಲ್ಬಣವಾಯಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news

