Breaking News

ಧಾರವಾಡ ಪ್ರತಿಭಟನೆ ಪ್ರಕರಣ: 35 ಮಂದಿ ವಶಕ್ಕೆ – ಕಮಿಷನರ್ ವಿವರಣೆ

ಧಾರವಾಡ : ಹುಬ್ಬಳ್ಳಿ–ಧಾರವಾಡ ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಉದ್ಯೋಗಿ ಆಕಾಂಕ್ಷಿಗಳ ಪ್ರತಿಭಟನೆ ಕುರಿತು ಮಾಧ್ಯಮಗಳಿಗೆ ಮಾತನಾಡಿದ್ದಾರೆ. “ಉದ್ಯೋಗಾಕಾಂಕ್ಷಿಗಳು ಇಂದು ಪ್ರತಿಭಟನೆಗೆ ಮುಂದಾಗಿದ್ದರು. ಪ್ರತಿಭಟನೆಯ ಸಂಪೂರ್ಣ ರೂಪುರೇಷೆ ಬಗ್ಗೆ ನಾವು ಮಾಹಿತಿ ಕೇಳಿದ್ದೇವೆ. ಆದರೆ ನೀಡಬೇಕಾದ ಸ್ಪಷ್ಟ ಮಾಹಿತಿ ನೀಡದ ಕಾರಣ, ಅವರ ಮನವಿಯನ್ನು ಪರಿಗಣಿಸಲು ಸಾಧ್ಯವಾಗಲಿಲ್ಲ ಎಂದು.. ಧಾರವಾಡ ಮತ್ತು ಸುತ್ತಮುತ್ತ ಪ್ರದೇಶದಲ್ಲಿ ಈಗಾಗಲೇ ಒಂದು ಲಕ್ಷದಷ್ಟು ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ವಾಸವಿದ್ದಾರೆ. ಪ್ರತಿಭಟನೆ ಸ್ಥಳವಾಗಿ ಅವರು ಸೂಚಿಸಿದ ಶ್ರೀನಗರ ಪ್ರದೇಶದಲ್ಲಿ 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಬಹುದು ಎಂದು ತಿಳಿಸಿದ್ದಾರೆ. ಅಹೋರಾತ್ರಿ ಧರಣಿ ನಡೆಸುವುದಾಗಿ ಕೂಡ ತಿಳಿಸಿದ್ದಾರೆ. ಈ ಕಾರಣಕ್ಕೆ ನಾವು ಅವರನ್ನು ವಿಚಾರಿಸಿದ್ದೇವೆ —
ಯಾರು ಆರ್ಗನೈಜರ್?
ಎಷ್ಟು ಮಂದಿ ಬರ್ತಾರೆ?
ಎಲ್ಲಿ ಎಲ್ಲಿ ಬರ್ತಾರೆ? ಸ್ಪಷ್ಟ ಮಾಹಿತಿ ಇಲ್ಲದಿರುವುದು ದೊಡ್ಡ ಸಮಸ್ಯೆ ಆಗಿದೆ. ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದಾಗ, ಯಾವುದಾದರೂ ಕಿಡಿಗೇಡಿ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡರೆ ಕಾನೂನು–ಸುವ್ಯವಸ್ಥೆಗೆ ತೊಂದರೆ ಉಂಟಾಗಬಹುದು. ಹಿಂದೆಯೂ ಜುಬಿಲಿ ವೃತ್ತದಲ್ಲಿ ಪ್ರತಿಭಟನೆ ವೇಳೆ ಐತಿಹಾಸಿಕ ರಸ್ತೆ ಬಂದ್ ಮಾಡಲಾಗಿತ್ತು. ಅವರು ನೀಡಿದ್ದ ಮಾರ್ಗ ಬೇರೆ, ಸೇರಿದ್ದ ರೈಲಿ ಬೇರೆ. ಕೆಲವು ಮಂದಿ ಫ್ಲೆಕ್ಸ್ ಹರಿದು ಹಾಕಿದ ಘಟನೆ ಕೂಡ ನಡೆದಿದೆ. ಈ ಪ್ರತಿಭಟನೆ ವಿದ್ಯಾರ್ಥಿಗಳದ್ದಾಗಿರುವುದರಿಂದ, ಯಾವುದೇ ತಪ್ಪಾಗಿದೆ ಎಂದರೆ ಕೇಸ್ ದಾಖಲಾಗಿ, ಅವರ ಭವಿಷ್ಯಕ್ಕೆ ಸಮಸ್ಯೆಯಾಗುತ್ತದೆ. ಆದ್ದರಿಂದ ಅವರ ಹಿತದೃಷ್ಟಿಯಿಂದಲೇ ನಾವು ಹೆಚ್ಚಿನ ಎಚ್ಚರತೆಗೆ ಆದ್ಯತೆ ನೀಡಿದ್ದೇವೆ. ಸರ್ಕಾರದ ಒತ್ತಡಕ್ಕೆ ಮಣಿದು ನಿರಾಕರಣೆ ನೀಡಿದ್ದೇವೆ ಎಂಬ ಆರೋಪ ಸುಳ್ಳು. ಪ್ರಜಾಪ್ರಭುತ್ವ ದೇಶದಲ್ಲಿ ಪ್ರತಿಭಟಿಸಲು ಎಲ್ಲರಿಗೂ ಹಕ್ಕು ಇದೆ. ಆದರೆ ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಜವಾಬ್ದಾರಿ.” ಕಮಿಷನರ್ ಇನ್ನಷ್ಟು ಸ್ಪಷ್ಟಪಡಿಸಿದ್ದು -ಪ್ರತಿಭಟನೆ ವೇಳೆ ಪರಿಸ್ಥಿತಿ ಕೈಮೀರಿ ಹೋಗದಂತೆ 30 ರಿಂದ 35 ಯುವಕರನ್ನು ಕೇವಲ ಪ್ರೀವೆಂಟಿವ್ ಕಸ್ಟಡಿಗೆ ತೆಗೆದುಕೊಂಡಿರುವೆವು ಎಂದು ಹೇಳಿದ್ದಾರೆ.

Share News

About BigTv News

Check Also

ಆಕಸ್ಮಿಕ ಬೆಂಕಿ: ಸ್ಕಾರ್ಪಿಯೋ ಕಾರು ಸುಟ್ಟು ಭಸ್ಮ

ವಿಜಯಪುರ: ನಿಲ್ಲಿಸಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಸುಟ್ಟು ಭಸ್ಮವಾಗಿರುವ ಘಟನೆ ನಗರದ ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ (ಜು.18) …

Leave a Reply

Your email address will not be published. Required fields are marked *