Breaking News

ಪ್ರತಿಭಟನಾಕಾರಾರ ಬಂಧನ – ಧಾರವಾಡದಲ್ಲಿ ಚಕಮಕಿ

ಧಾರವಾಡದಲ್ಲಿ ಇಂದು ಜನ ಸಾಮಾನ್ಯರ ವೇದಿಕೆ ನೀಡಿದ್ದ “ಧಾರವಾಡ ಚಲೋ” ಕರೆ ಹಿನ್ನೆಲೆಯಲ್ಲಿ
ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ಜಾರಿಗೊಂಡಿದೆ. ಶ್ರೀನಗರ ವೃತ್ತ, ಸಪ್ತಾಪುರ, ಹಾಗೂ ಇಡೀ ಹು-ಧಾ ಆಯುಕ್ತಾಲಯ ವ್ಯಾಪ್ತಿಯಲ್ಲಿ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳನ್ನ ತಪ್ಪಿಸಲು ಕಠಿಣ ಬಂದೋಬಸ್ತ್ ಮಾಡಲಾಗಿದೆ. ರ್ಯಾಲಿಗೆ ಅನುಮತಿ ನೀಡದ ನಿರ್ಧಾರಕ್ಕೆ ಪ್ರತಿಭಟನಾಕಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹು-ಧಾ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಪ್ರತಿಭಟನಾಕಾರರನ್ನು ಮನವೊಲಿಸಲು ಮುಂದಾದರೂ
ವಿದ್ಯಾರ್ಥಿಗಳು ಮಾತು ಕೇಳದೆ ಆಕ್ರೋಶ ವ್ಯಕ್ತಪಡಿಸಿದರು. “ಪ್ರತಿಭಟನೆಯನ್ನು ಹತ್ತಿಕ್ಕುತ್ತಿದ್ದೀರಿ!” ಎಂದು ವಿದ್ಯಾರ್ಥಿಗಳ ಆರೋಪ ಮಾಡಿದ್ದಾರೆ. “ಬೇಕೇ ಬೇಕು… ನ್ಯಾಯ ಬೇಕು!” ಎಂಬ ಘೋಷಣೆಗಳೊಂದಿಗೆ
ವಿದ್ಯಾರ್ಥಿಗಳ ಆಕ್ರೋಶ ಹೆಚ್ಚಳ. ಮಾತಿನ ಚಕಮಕಿ ತೀವ್ರಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲು ಸಜ್ಜಾದರು. ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳನ್ನು ಎತ್ತಿಕೊಂಡು ಬಸ್‌ಗೆ ಸೇರಿಸಿ ವಶಕ್ಕೆ ಪಡೆದರು. ಎರಡು ಬಸ್‌ಗಳಲ್ಲಿ ಪ್ರತಿಭಟನಾಕಾರರನ್ನು ಸ್ಥಳಾಂತರ. ಸರಕಾರದ ವಿರುದ್ಧ ಧಿಕ್ಕಾರ ಕೂಗಿದ ವಿದ್ಯಾರ್ಥಿಗಳನ್ನು ಪೊಲೀಸರು ಸ್ಥಳದಿಂದ ತೆರವು ಮಾಡಿದರು.

Share News

About BigTv News

Check Also

ರಾಜಕೀಯ ಮರೆತು ಮಾನವೀಯತೆ ಮೆರೆದ ಕ್ಷಣ: ಚೆನ್ನಮ್ಮ ಅಂತಿಮ ದರ್ಶನದ ವೇಳೆ ದೇವೇಗೌಡರ ಕೈಹಿಡಿದು ಸಿದ್ದರಾಮಯ್ಯ ಸಾಂತ್ವನ

ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಮಾನವೀಯತೆ ಎಲ್ಲಕ್ಕಿಂತ ದೊಡ್ಡದು ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಘಟನೆ ಸಾಕ್ಷಿಯಾಯಿತು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ …

Leave a Reply

Your email address will not be published. Required fields are marked *