ಹರಿಯಾಣದ ಪಾಣಿಪತ್‌ನ ಹಳ್ಳಿಯಲ್ಲಿ ಮದುವೆಯ ಸಂಭ್ರಮ ಆದರೆ, ಸಂಭ್ರಮದ ಡೋಲುಗಳು ಕೆಲವೇ ಹೊತ್ತಲ್ಲಿ ನಿಂತಿತು. ಅಲ್ಲಿ ಸೇರಿದ್ದ ಸಂಬಂಧಿಕರಲ್ಲಿ ಭೀತಿ ಆವರಿಸಿತ್ತು. ಮದುವೆಗಾಗಿ ರೆಡಿಯಾಗಿದ್ದ ಆರು ವರ್ಷದ ಬಾಲಕಿ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದಳು.ಪಾಣಿಪತ್‌ನಲ್ಲಿ ತನ್ನ ಪುಟ್ಟ ಸೊಸೆಯನ್ನು ಕೊಲೆ ಮಾಡಿದ್ದಕ್ಕಾಗಿ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಆಕೆಗೆ ಕೊಲೆ ಮಾಡಲು ಇದ್ದ ಏಕೈಕ ಉದ್ದೇಶ ಏನೆಂದರೆ, ಯಾವುದೇ ಕಾರ್ಯಕ್ರಮದಲ್ಲಿ ಯಾರೂ ಕೂಡ ತನಗಿಂತ ಸುಂದರವಾಗಿ ಕಾಣಿಸಬಾರದು ಎಂದು ಬಯಸಿದ್ದಳು. ಹೀಗೆ ಕಂಡವನ್ನು ಕೊಲೆ ಮಾಡುತ್ತಿದ್ದಳು.ಇಡೀ ಕುಟುಂಬ ಸೋನಿಪತ್‌ನಲ್ಲಿ ಮದುವೆಯ ಕಾರ್ಯಕ್ರಮದಲ್ಲಿ ವ್ಯಸ್ಥರಾಗಿದ್ದಾಗ, ಆರೋಪಿಯಾಗಿರುವ ಪೂನಮ್ ತನ್ನ 6 ವರ್ಷದ ಸೊಸೆಯನ್ನು ಸೋಮವಾರ ವಾಟರ್ ಟಬ್‌ನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

