Breaking News

ಚನ್ನಪಟ್ಟಣ: ಕಾರಿನ ಗಾಜು ಒಡೆದು ನಗದು ಕಳವು

ಕಾರಿನ ಹಿಂದಿನ ಬಾಗಿಲು ಗಾಜು ಒಡೆದು ಬ್ಯಾಗ್‌ನಲ್ಲಿದ್ದ ₹3ಲಕ್ಷ ನಗದು ದೋಚಿರುವ ಘಟನೆ ನಗರದ ಕಾಳಿದಾಸ ಹಾಸ್ಟೆಲ್ ಮುಂಭಾಗದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.ತಾಲ್ಲೂಕಿನ ಹನುಮಾಪುರದೊಡ್ಡಿ ಗುತ್ತಿಗೆದಾರ ಅರ್ಕೇಶ್ ಕುಮಾರ್, ನಗರಕ್ಕೆ ಬಂದು ಬೆಂಗಳೂರು-ಮೈಸೂರು ಹೆದ್ದಾರಿ ಬದಿಯಲ್ಲಿ ತಮ್ಮ ಕಾರು ನಿಲ್ಲಿಸಿ ಪಕ್ಕದಲ್ಲೇ ಇರುವ ಕಚೇರಿಯೊಂದಕ್ಕೆ ತೆರಳಿದ್ದರು.ಅವರು ವಾಪಸ್ ಬಂದಾಗ ಕಾರಿನ ಹಿಂಬದಿ ಬಾಗಿಲ ಗಾಜು ಒಡೆದಿರುವುದು ಕಂಡು ಬಂದಿದೆ. ನಂತರ ಪರಿಶೀಲಿಸಿದಾಗ ಕಾರಿನಲ್ಲಿ ಇಟ್ಟಿದ್ದ ನಗದು ಕಾಣೆಯಾಗಿರುವುದು ತಿಳಿದು ಬಂದಿದೆ. ಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *