Breaking News

ಸುರಪುರ: ಜೆಇ ಮನೆಯಲ್ಲಿ ₹ 46.11 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಇಲ್ಲಿನ ನಗರಸಭೆಯ ಕಿರಿಯ ಎಂಜಿನಿಯರ್‌ (ಜೆಇ) ಮಹೇಶ ಶಿವಾನಂದ ಅವರ ಮನೆ ಅಲ್ಮೇರಾದಲ್ಲಿ ಇರಿಸಿದ್ದ ₹ 40 ಸಾವಿರ ನಗದು, ₹ 46.11 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿದೆ.ಮಹೇಶ ತನ್ನ ಸಹೋದರನ ಜೊತೆಗೂಡಿ ಸತ್ಯಂಪೇಟೆ ರಸ್ತೆ ಸಮೀಪ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ.ಮಂಗಳವಾರ ರಾತ್ರಿ ನಗರ ದಿವಳಗುಡ್ಡದ ಮರಗಮ್ಮ ದೇವಿಯ ಜಾತ್ರೆಗಾಗಿ ಕುಟುಂಬದ ಸದಸ್ಯರು ತೆರಳಿದ್ದರು. ‘ಬಾಗಿಲಿನ ಕೀಲಿ ಕೊಂಡಿ ಮುರಿದು ಕೃತ್ಯ ಎಸಗಿದ್ದು ₹ 40 ಸಾವಿರ ನಗದು, 642 ಗ್ರಾಂ ತೂಕದ ಚಿನ್ನದ ಆಭರಣ, 1,295 ಗ್ರಾಂ ಬೆಳ್ಳಿ ಆಭರಣ ಕಳುವಾಗಿದೆ’ ಎಂದು ಸುರಪುರ ಠಾಣೆಗೆ ದೂರು ನೀಡಲಾಗಿದೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *