ಮೀರತ್ನಲ್ಲಿ ನಾಗರ ಹಾವು ಅಮಿತ್ನನ್ನು ಕಚ್ಚಿದ್ದು ನಿಜ ಆದ್ರೆ ಅಮಿತ್ ಹಾವು ಕಚ್ಚೋದಕ್ಕೂ ಮುನ್ನವೇ ಜೀವ ಬಿಟ್ಟಿದ್ದ. ಅಮಿತ್ ಜೀವ ಬಿಡೋಕು ಮುಂಚೆ, ಹಾವು ಅಮಿತ್ ಬಳಿ ಬರುವ ಮುಂಚೆ, ಅಮಿತ್ ಪಕ್ಕದಲ್ಲೇ ಇದ್ದವಳು ಅಮಿತ್ ಪತ್ನಿ ರಮಿತಾ.ರಮಿತಾ, ಅಮಿತ್ನ ಮಡದಿ.ಮನೆಯವರೂ ಸೇರಿ, ಹಾವು ಕಚ್ಚಿದರಿಂದಲೇ ಅಮಿತ್ ಜೀವ ಹೋಗಿದೆ ಅಂತ ಅಂದುಕೊಂಡಿದ್ದರು. ಆದ್ರೆ ಮಾಸ್ಟರ್ ಪ್ಲಾನ್ ಮಾಡಿ, ಗಂಡನ ಮರ್ಡರ್ ಮಾಡಿದ್ದ, ರಮಿತಾಳ ರಮಿಸುವ ಆಟಕ್ಕೆ ಬ್ರೇಕ್ ಬೀಳಿಸಿದ್ದು ಪೋಸ್ಟ್ ಮಾರ್ಟ್ಂ ರಿಪೋರ್ಟ್. ಗಂಡನ ಕೊಂದು ಪ್ರಿಯಕರನಿಗೆ ವಶವಾಗಬೇಕೆಂದಿದ್ದ ರಮಿತಾ, ಅತ್ತ ಗಂಡನೂ ಇಲ್ಲದೇ, ಇತ್ತ ಪ್ರೇಮಿಯೂ ಇಲ್ಲದೇ ಕೊಲೆಗಾತಿಯಾಗಿ ಜೈಲು ಸೇರಿದ್ದಾಳೆ. ರಮಿತಾಳ ಕ್ರೈಮ್ ಮೈಂಡ್ ಬಗ್ಗೆ ತಿಳಿದು ಇಡೀ ಊರಿನ ಜನ ದಂಗಾಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

