Breaking News

ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ಪುಂಡರ ರಾದ್ಧಾಂತ: RPF ಸಿಬ್ಬಂದಿ ಮೇಲೆ ಹಲ್ಲೆ

ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ಪುಂಡರು ರಾದ್ಧಾಂತ ಮಾಡಿದ್ದಾರೆ. ಬೆಂಗಳೂರಿನಿಂದ ಗೋವಾಗೆ ಹೊರಟಿದ್ದ ರೈಲಿನಲ್ಲಿ ಪುಂಡಾಟಿಕೆ ಮೆರೆಯಲಾಗಿದೆ.ಚೈನ್ ಎಳೆದಿರುವುದನ್ನು ಪ್ರಶ್ನೆ ಮಾಡಿದ್ದ ಆರ್.ಪಿ.ಎಫ್. ಸಿಬ್ಬಂದಿಯೊಂದಿಗೆ ಜಗಳವಾಡಿದ ಪುಂಡರು ಹಲ್ಲೆ ಮಾಡಿದ್ದಾರೆ, ಯಶವಂತಪುರ ರೈಲ್ವೆ ಠಾಣೆಗೆ ಆರ್.ಪಿ.ಎಫ್.ಸಿಬ್ಬಂದಿ ದೂರು ನೀಡಿದ್ದಾರೆ. ರೈಲು ತಡೆದು ಹಲ್ಲೆ ಆರೋಪದಡಿ ಮೂವರ ವಿರುದ್ಧ ದೂರು ದಾಖಲಾಗಿದೆ. ಚೈನ್ ಎಳೆದಿದ್ದ ಮೂವರು ಪುಂಡರನ್ನು ಆರ್.ಪಿ.ಎಫ್. ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದು, ಯಶವಂತಪುರ ರೈಲ್ವೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಸ್ವಲ್ಪ ಸಮಯ ವಿಳಂಬದ ನಂತರ ಬೆಂಗಳೂರಿನಿಂದ ಗೋವಾಗೆ ವಾಸ್ಕೋ ಡಿ ಗಾಮಾ ರೈಲು ತೆರಳಿದೆ.

Share News

About BigTv News

Check Also

80s ಫೋಟೋ ಟ್ರೆಂಡ್‌ನಲ್ಲೂ ಸೈಬರ್ ವಂಚಕರ ಕನ್ನ: ಹಣ ಕೊಡದಿದ್ದಕ್ಕೆ ಬೆತ್ತಲೆ ಫೋಟೋ ಹರಿಬಿಟ್ಟ ವಂಚಕರು

ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆಯ ವಿನೋದ್ (45) ಎಂಬುವರು 80ರ ದಶಕದ ಶೈಲಿಯಲ್ಲಿ ಫೋಟೋ ಎಡಿಟ್ ಮಾಡಲು ನಕಲಿ ಆ್ಯಪ್ …

Leave a Reply

Your email address will not be published. Required fields are marked *