ಹೊನ್ನಾವರ ತಾಲ್ಲೂಕಿನ ಮಂಕಿಯ ಮಂಡಿ ಕಡಲತೀರದ ಬಳಿ ಗುರುವಾರ ಸಂಜೆ ಮೀನು ಹಿಡಿಯಲು ಹೋದ ಸಹೋದರರಿಬ್ಬರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.ಮದನ ನಾರಾಯಣ ಖಾರ್ವಿ (17), ಸುಜನ ನಾರಾಯಣ ಖಾರ್ವಿ (15) ಮೃತ ಸಹೋದರರು. ಪಾತಿ ದೋಣಿಯಲ್ಲಿ ಮೀನು ಹಿಡಿಯಲು ಹೋಗಿದ್ದ ವೇಳೆ ಅಲೆಗಳ ಅಬ್ಬರಕ್ಕೆ ದೋಣಿ ಮುಳುಗಿದೆ.ತಡರಾತ್ರಿ ಅವರ ಮೃತದೇಹಗಳು ಪತ್ತೆಯಾಗಿದೆ ಎಂದು ಮಂಕಿ ಠಾಣೆ ಪೊಲೀಸರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

