Breaking News

ಟೈರ್‌ ಬ್ಲಾಸ್ಟ್‌ ಆಗಿ ಎರಡು ಕಾರ್‌ಗೆ ಡಿಕ್ಕಿ ಹೊಡೆದ ದೈತ್ಯ ಬಸ್‌: ಏಳು ಮಂದಿ ದುರ್ಮರಣ

ಸಾರಿಗೆ ಬಸ್‌ನ ಟೈರ್ ಸ್ಫೋಟಗೊಂಡು 2 ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ 7 ಮಂದಿ ಸಾವಿಗೀಡಾದ ಘಟನೆ ತಿರುಚಿರಾಪಳ್ಳಿ – ಚೆನ್ನೈ ಹೆದ್ದಾರಿಯಲ್ಲಿ ನಡೆದಿದೆ.ಬಸ್‌ ತಿರುಚಿರಾಪಳ್ಳಿಯಿಂದ ಚೆನ್ನೈಗೆ ತೆರಳುತ್ತಿತ್ತು. ಈ ವೇಳೆ ತಿತ್ತಕುಡಿ ಸಮೀಪ ಬಸ್‌ನ ಟೈರ್ ಸಿಡಿದು ಚಲಿಸುತ್ತಿದ್ದ ದಿಕ್ಕನ್ನೇ ಬದಲಿಸಿ, ಎರಡು ಕಾರುಗಳಿಗೆ ಡಿಕ್ಕಿಯಾಗಿದೆ.ಪರಿಣಾಮ 7 ಮಂದಿ ಸಾವನ್ನಪ್ಪಿದ್ದಾರೆ. ಬಸ್‌ ಟೈರ್‌ ಸ್ಫೋಟದಿಂದ ಡಿವೈಡರ್‌ ದಾಟಿ ಎದುರಿನಿಂದ ಬರುತ್ತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share News

About BigTv News

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *