ಮಂಗಳೂರು ನಗರನಲ್ಲಿರುವ ಜಿಲ್ಲಾ ಕಾರಾಗೃಹದೊಳಗೆ ಮತ್ತೊಂದು ಮೊಬೈಲ್ ಪತ್ತೆಯಾಗಿದೆ.ಕಾರಾಗೃಹದ ಅಧೀಕ್ಷಕ ಶರಣಪ್ಪ ಅವರು ಸೋಮವಾರ ರಾತ್ರಿ 8.40ಕ್ಕೆ ಅಧಿಕಾರಿ, ಸಿಬಂದಿಯೊಂದಿಗೆ ‘ಎ’ ವಿಭಾಗದ 5ನೇ ಕೊಠಡಿಗೆ ತಪಾಸಣೆಗೆ ಹೋದಾಗ ಕೊಠಡಿಯ ಒಳಭಾಗದ ಶೌಚಾಲಯದ ಹತ್ತಿರ ಪ್ಲಾಸ್ಟಿಕ್ ಕವರ್ ಸುತ್ತಿದ ಪೊಟ್ಟಣ ಕಂಡುಬಂದಿತ್ತು.ತೆರೆದು ನೋಡಿದಾಗ ಅದರಲ್ಲಿ ನೋಕಿಯಾ ಕಂಪೆನಿಯ ಬ್ಯಾಟರಿ ಸಮೇತ ಇರುವ ಕೀ ಪ್ಯಾಡ್ ಮೊಬೈಲ್, ಚಾರ್ಜರ್ ಹಾಗೂ ಚಾರ್ಜರ್ ಪಿನ್ ದೊರೆತಿದೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ನಡೆಸಿದ ತಪಾಸಣೆ ವೇಳೆ ನಾಲ್ಕು ಮೊಬೈಲ್‌ಗಳು ಪತ್ತೆಯಾಗಿದ್ದವು.
bigtvnews | Hubli Dharwad News | Kannada News | Karnataka News Hubli News | News In Hubli | Local news

