ವಿಜಯಪುರ : ಸಂಸಾರದಲ್ಲಿ ತೊಂದರೆಯಾಗಿದೆ. ಗಂಡ ಸರಿಯಿಲ್ಲ ಅಂತ ಮಹಿಳೆಯೊಬ್ಬರು ದೂರು ಹಿಡಿದುಕೊಂಡು ಪೊಲೀಸ್ ಠಾಣೆಯ ಮೆಟ್ಟಿಲೇರಿದಾಗ ಪೊಲೀಸಪ್ಪ ಗಂಡನನ್ನು ಕರೆಸಿ ಬುದ್ದಿ ಹೇಳೋದು ಬಿಟ್ಟು, ದೂರು ಕೊಡಲು ಬಂದ ಮಹಿಳೆಯನ್ನೇ ಬುಟ್ಟಿಗೆ ಹಾಕಿಕೊಂಡಿದ್ದಾನೆ.ಭೀಮಾಶಂಕರ ಹೋಳ್ಕರ ಎಂಬುವವರು ಹೀಗೆ ಓರ್ವ ಪೊಲೀಸ್ ಅಧಿಕಾರಿಯ ವಿರುದ್ಧ ತನ್ನ ಸಂಸಾರದ ಆರೋಪ ಮಾಡಿದ್ದಾರೆ. ಗಂಡ-ಹೆಂಡತಿ ಮಧ್ಯೆ ಜಗಳ ಆದ ಕಾರಣ ಇವರ ಪತ್ನಿ ಅನುರಾಧಾ ಆಲಮೇಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಎಎಸ್‌ಐ ಮನೋಹರ ಕಂಚಗಾರ ಅನುರಾಧ ಮೊಬೈಲ್ ನಂಬರ್ ಪಡೆದುಕೊಂಡಿದ್ದ ಎನ್ನಲಾಗಿದೆ. ಆ ಬಳಿಕ ವಿಚಾರಣೆ ನೆಪದಲ್ಲಿ ಅನುರಾಧಗೆ ಕರೆ ಮಾಡಿ ಸ್ನೇಹ ಬೆಳೆಸಿಕೊಂಡಿದ್ದಾನೆ. ಕೆಲವೇ ದಿನಗಳಲ್ಲಿ ಈ ಸ್ನೇಹ ಸಲುಗೆಯಾಗಿ ಅದು ಅನೈತಿಕ ಸಂಬಂಧಕ್ಕೆ ತಿರುಗಿದೆ. ಒಮ್ಮೆ ಪತ್ನಿ ಹಾಗೂ ಪೊಲೀಸ್ ಅಧಿಕಾರಿ ನಡುವಿನ ವಾಟ್ಸ್ ಆಯಪ್ ಚಾಟಿಂಗ್ ಸಿಕ್ಕಿಬಿದ್ದ ಹಿನ್ನಲೆ ಇವರ ರಾಸಲೀಲೆ ಬಯಲಾಗಿದೆ. ಈ ಪ್ರಕರಣದ ಸಂಬಂಧ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

