Breaking News

ಕಲಬುರಗಿ ಜೈಲಿನಲ್ಲಿ ಸಿಬ್ಬಂದಿಗಳೊಂದಿಗೆ PSI ಹಗರಣದ ಆರೋಪಿ ಆರ್.ಡಿ.ಪಾಟೀಲ್ ಕಿರಿಕ್: ಮತ್ತೊಂದು ದೂರು ದಾಖಲು

ಪಿಎಸ್‌ಐ ನೇಮಕಾತಿ ಹಾಗರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್, ಜೈಲು ಸಿಬ್ಬಂದಿಗಳ ಜೊತೆ ಕಿರಿಕ್ ಮಾಡಿರುವ ಘಟನೆ ಕಲಬುರಗಿ ಜೈಲಿನಲ್ಲಿ ನಡೆದಿದೆ.ಬ್ಯಾರಕ್ ತಪಾಸಣೆಗೆ ಬಂದಿದ್ದ ಜೈಲು ಸಿಬ್ಬಂದಿಗಳ ಜೊತೆ ತಗಾದೆ ತೆಗೆದಿರುವ ಆರ್.ಡಿ.ಪಾಟೀಲ್, ಅನುಮತಿ ಇಲ್ಲದೇ ತನ್ನ ಬ್ಯಾರಕ್ ತಪಾಸಣೆ ಮಾಡುವಂತಿಲ್ಲ ಎಂದು ಗಲಾಟೆ ಮಾಡಿದ್ದಾನೆ.ತನ್ನ ಬ್ಯಾರಕ್ ತಪಾಸಣೆಗೆ ಅನುಮತಿ ಪಡೆದುಕೊಳ್ಳಬೇಕು ಎಂದು ತಪಾಸಣೆಗೆ ಬಿಟ್ಟಿಲ್ಲ. ಇದರಿಂದ ಆರ್.ಡಿ.ಪಾಟಿಲ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಫರಹತಾಬಾದ್ ಠಾಣೆಯಲ್ಲಿ ಜೈಲು ಅಧೀಕ್ಷಕಿ ಅನಿತಾ ನೀಡಿದ ದೂರಿನ ಹಿನ್ನೆಲೆಯಲ್ಲಿ ಆರ್.ಡಿ.ಪಾಟೀಲ್ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *