ಬೆಳಗಾವಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಿಗೆ ಅವಮಾನ ಮಾಡಲಾಗಿದ್ದು, ಗಾಂಧೀಜಿಗೆ ಸಂತ ಕ್ಲಾಸ್ ಟೋಪಿ ಹಾಕಲಾಗಿದೆ.ಸಂತ ಕ್ಲಾಸ್ ಟೋಪಿ ಹಾಕಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.ಕ್ಯಾಂಪ್ ಪ್ರದೇಶದ ಬೋಸ್ ಲೈನಿನ ಪಿಲಿಪ್ ಸಿಮೋನ್ ಸಪ್ಪರಪು (25), ಹಿಂದವಾಡಿಯ ಆದರ್ಶ ನಗರದ ಆದಿತ್ಯ ನವಜೀತ್ ಹೆಡಾ (25) ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.ಇಬ್ಬರು ಕಿಡಿಗೇಡಿಗಳು ಬೆಳಗಾವಿಯ ಹಿಂಡಲಗಾ ರಸ್ತೆಯ ಕ್ಯಾಂಪ್ ಬಳಿಯಿರುವ ಗಾಂಧಿ ಪ್ರತಿಮೆಗೆ ಅವಮಾನ ಮಾಡಿದ್ದರು. ಕಿಡಗೇಡಿಗಳು ಪ್ರತಿಮೆಯ ತಲೆ ಮೇಲೆ ಹಾಗೂ ಕೈ ಮೇಲೆ ಟೋಪಿ ಹಾಕಿ ಫೋಟೋ ತೆಗೆದು ಹಂಚಿಕೊಂಡಿದ್ದರು. ಕಿಡಿಗೇಡಿಗಳ ಕೃತ್ಯಕ್ಕ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು.ಇದೀಗ ಅಂತಿಮವಾಗಿ ಕಿಡಿಗೇಡಿಗಳನ್ನು ಸೆರೆಹಿಡಿಯಲಾಗಿದೆ. ಅವಮಾನ ಮಾಡುವ ಸಲುವಾಗಿಯೇ ಇಬ್ಬರು ಕೃತ್ಯವೆಸಗಿದ್ದರು ಎನ್ನಲಾಗಿದ್ದು, ವಿಚಾರಣೆ ವೇಳೆ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

