Breaking News

ಮಂಗಳೂರು: ಗ್ಯಾಂಗ್‌ವಾರ್‌ಗೆ ಯತ್ನ: ಕೇಸು ದಾಖಲು

ಮಂಗಳೂರು: ನಗರದ ಹೊರವಲಯದ ಕಣ್ಣೂರು ಬಳಿ ಎರಡು ಗ್ಯಾಂಗ್‌ಗಳು ತಲವಾರು ಹಿಡಿದು ಪರಸ್ಪರ ಬೈದಾಡಿ ಗ್ಯಾಂಗ್‌ವಾರ್‌ಗೆ ಯತ್ನಿಸಿದ ಘಟನೆ ನಡೆದಿದೆ. ಈ ಸಂಬಂಧ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆ.9ರಂದು ಗಾಣದಬೆಟ್ಟು ಜಂಕ್ಷನ್‌ ಬಳಿ ಎರಡು ಕಾರುಗಳಲ್ಲಿ ಬಂದ ತಂಡಗಳು ತಲವಾರು ಝಳಪಿಸಿ ಪರಸ್ಪರ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದವು ಎನ್ನಲಾಗಿದೆ. ರೌಡಿಗಳ ಭಯದಿಂದ ಸ್ಥಳೀಯರು ದೂರು ನೀಡಲು ಹಿಂದೇಟು ಹಾಕಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಸಾರ್ವಜನಿಕರಲ್ಲಿ ಭಯ ಮೂಡಿಸಿ ಶಾಂತಿಭಂಗಕ್ಕೆ ಯತ್ನಿಸಿದ ಆರೋಪದಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *