Breaking News

ಬ್ಯಾಂಕ್ ಕೆವೈಸಿ ನೆಪದಲ್ಲಿ 6.50 ಲಕ್ಷ ರೂ. ವಂಚನೆ

ಶಿವಮೊಗ್ಗ: ಬ್ಯಾಂಕ್ ಕೆವೈಸಿ ಅಪ್‌ಡೇಟ್ ಮಾಡುವ ನೆಪದಲ್ಲಿ ಅಪರಿಚಿತರು ಕಳುಹಿಸಿದ ಲಿಂಕ್ ಹಾಗೂ ಎಪಿಕೆ ಫೈಲ್ ಡೌನ್‌ಲೋಡ್ ಮಾಡಿದ ವ್ಯಕ್ತಿ 6.50 ಲಕ್ಷ ರೂ. ಕಳೆದುಕೊಂಡಿದ್ದಾರೆ. ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ಎಸ್‌ಬಿಐ(Sbi) ಖಾತೆ ಅಪ್‌ಡೇಟ್ ಮಾಡುವಂತೆ ಮೊಬೈಲ್‌ಗೆ ಮೆಸೇಜ್ ಬಂದಿತ್ತು.ಅದನ್ನು ನಂಬಿದ ಅವರು ಫೈಲ್ ಡೌನ್‌ಲೋಡ್ ಮಾಡಿ ಮಾಹಿತಿ ಭರ್ತಿ ಮಾಡಿದ್ದರು. ಮೊದಲು 50 ಸಾವಿರ ರೂ., ನಂತರ ಎರಡು ಬಾರಿ ತಲಾ 2 ರೂ. ಹಾಗೂ ಒಮ್ಮೆ 1 ಲಕ್ಷ ರೂ. ಕಡಿತವಾಗಿದೆ. ಮೊಬೈಲ್ ಮೆಸೇಜ್ ಬಂದಾಗ ವಂಚನೆ ಬೆಳಕಿಗೆ ಬಂದಿದೆ. ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಬಾಲಕನ ಹತ್ಯೆ ಪ್ರಕರಣ: ಅಪ್ರಾಪ್ತರಿಬ್ಬರ ಬಂಧನ

ಬೆಂಗಳೂರು: ವಿಭೂತಿಪುರ ಕೆರೆಯ ಬಳಿ 13 ವರ್ಷದ ಬಾಲಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತ ಆರೋಪಿಗಳನ್ನು ಎಚ್‌ಎಎಲ್ ಠಾಣೆ …

Leave a Reply

Your email address will not be published. Required fields are marked *