Breaking News

ನೆಲ್ಲಿಕಾರು ಬಳಿ ಕಾರು – ಟೆಂಪೋ ಢಿಕ್ಕಿ: ಮೂವರಿಗೆ ಗಾಯ

ಮೂಡುಬಿದಿರೆ: ಸೋಮವಾರ ಬೆಳಗ್ಗೆ ನೆಲ್ಲಿಕಾರು-ಕಾರ್ಕಳ ಮುಖ್ಯ ರಸ್ತೆಯಲ್ಲಿ ಹೊಸ್ಮಾರು ಕಡೆಗೆ ಸಾಗುತ್ತಿದ್ದ ಗೂಡ್ಸ್ ಟೆಂಪೋ ಮತ್ತು ಎದುರಿನಿಂದ ಬರುತ್ತಿದ್ದ ಕಾರು ಮುಖಾಮುಖಿ ಢಿಕ್ಕಿ ಹೊಡೆದು ಮೂವರು ಗಾಯಗೊಂಡಿದ್ದಾರೆ. ಟೆಂಪೋ ಚಾಲಕ ಕೃಷ್ಣರಾಜ್, ಕಾರು ಚಾಲಕ ಲಲಿತೇಶ್ ಗೌಡ ಹಾಗೂ ಬಾಲಕ ಪ್ರವೀಣ್ ಗಾಯಗೊಂಡವರು. ಕಾರು ಹಾಗೂ ಟೆಂಪೋ ಎರಡೂ ಜಖಂಗೊಂಡಿವೆ. ಗೂಡ್ಸ್ ಟೆಂಪೋದಲ್ಲಿ ಕಾರ್ಕಳ ಕಡೆಯಿಂದ ಮನೆ ಖಾಲಿ ಮಾಡಿ ಸಾಮಗ್ರಿಗಳನ್ನು ಸ್ಥಳಾಂತರಿಸಲು ತೆರಳುತ್ತಿದ್ದ ಕುಟುಂಬ ಪ್ರಯಾಣಿಸುತ್ತಿತ್ತು. ಗಾಯಾಳುಗಳನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Share News

About BigTv News

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *