ಇರಾನ್ : ಭಾರಿ ಮಳೆಯಾಗುತ್ತಿದ್ದು, ಭೂಕುಸಿತ ಮತ್ತು ಪ್ರವಾಹ ಸಂಭವಿಸಿದೆ. ಇದರಲ್ಲಿ 53 ಜನರು ಸಾವನ್ನಪ್ಪಿದ್ದು, ಕಾಣೆಯಾದವರಿಗಾಗಿ ರಕ್ಷಾಣ ಕಾರ್ಯಾಚರಣೆ ಮುಂದುವರೆದಿದೆ ಎನ್ನಲಾಗುತ್ತಿದೆ.
ಎರಡು ದಿನಗಳ ಪ್ರವಾಹದಲ್ಲಿ 16 ಜನರು ಇನ್ನೂ ಕಾಣೆಯಾಗಿದ್ದಾರೆ. ಇರಾನ್ನ 31 ಪ್ರಾಂತ್ಯಗಳ ಪೈಕಿ 18 ನಗರದಲ್ಲಿ ಸುಮಾರು 400 ಪಟ್ಟಣಗಳು ಮತ್ತು ಹಳ್ಳಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ ಎಂದು ರೆಡ್ ಕ್ರೆಸೆಂಟ್ ಸೊಸೈಟಿಯ ತುರ್ತು ಕಾರ್ಯಾಚರಣೆಯ ಮುಖ್ಯಸ್ಥ ಮೆಹದಿ ವಲಿಪೋರ್ ತಿಳಿಸಿದ್ದಾರೆ.
ರಾಜಧಾನಿ ಟೆಹ್ರಾನ್‌ನ ಈಶಾನ್ಯದಲ್ಲಿರುವ ಅಲ್ಬೋರ್ಜ್ ಪರ್ವತಗಳ ತಪ್ಪಲಿನಲ್ಲಿ ಶುಕ್ರವಾರ 10 ಜನರು ಸಾವನ್ನಪ್ಪಿದ್ದು, ಸುಮಾರು ಆರು ಜನರು ನಾಪತ್ತೆಯಾಗಿದ್ದಾರೆ. ಎಚ್ಚರಿಕೆ ಹೊರತಾಗಿಯೂ ಚಾರಣಿಗರು ಇನ್ನೂ ಫಿರೋಜ್ ಕೂಹ್ ಕಡೆಗೆ ಹೋಗುತ್ತಿದ್ದಾರೆ ಎಂದು ಟೆಹ್ರಾನ್ ಗವರ್ನರ್ ಮೊಹ್ಸೆನ್ ಮನ್ಸೌರಿ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





