ಸಾರ್ವಜನಿಕರು ಧೈರ್ಯದಿಂದ ಮುಂದೆ ಬಂದು ಲೋಕಾಯುಕ್ತ, ಎಸಿಬಿ ಹಾಗೂ ಇತರೆ ತನಿಖಾ ಸಂಸ್ಥೆಗಳಿಗೆ ದೂರು ಸಲ್ಲಿಸುವ ಮೂಲಕ ಲಂಚಮುಕ್ತ ಕರ್ನಾಟಕ ನಿರ್ಮಾಣಕ್ಕೆ ಕೈಜೋಡಿಸಬೇಕು. ವಿಶೇಷವಾಗಿ ಯುವಕರು ಈ ಹೋರಾಟದಲ್ಲಿ ಮುಂಚೂಣಿಗೆ ಬರಬೇಕೆಂಬುದು ನಮ್ಮ ಆಶಯ “ಕೆಲವೊಂದು
ಬೆರಳೆಣಿಕೆ ಭ್ರಷ್ಟ ಪೊಲೀಸ್ ಅಧಿಕಾರಿಗಳು
ಇಡೀ ಪೊಲೀಸ್ ಇಲಾಖೆಗೆ ಕಳಂಕ ತರುವ ಕೆಲಸ ನಡೆಯುತ್ತಿದೆ.
ಇಂತಹ ಭ್ರಷ್ಟ ಪೊಲೀಸರಿಗೆ ಕಠಿಣ ಶಿಕ್ಷೆ ಆಗಲೇಬೇಕು.
ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಒಳ್ಳೆಯ ಪೋಲಿಸ್ ಅಧಿಕಾರಿಗಳನ್ನು ರಕ್ಷಿಸಿ ಗೌರವಿಸುವ ವ್ಯವಸ್ಥೆ ಇನ್ನಷ್ಟು ಬಲಪಡಿಸಬೇಕು.”
ಗೋವಿಂದರಾಜು ಪ್ರಕರಣದಲ್ಲಿ ₹4 ಲಕ್ಷ ಹಾಗೂ ಚೇತನ್ ಕುಮಾರ್ ಪ್ರಕರಣದಲ್ಲಿ ₹40,000 ಸಾವಿರ.. ಲಂಚ ಬೆಳಕಿಗೆ ಬಂದಿರುವುದು ಕೇವಲ ಹೊರಬಂದ ಉದಾಹರಣೆಗಳು ಮಾತ್ರ. ಇಂತಹ ಅನೇಕ ಪ್ರಕರಣಗಳು ಕಣ್ಣು ಕಾಣದೆ ಕರ್ನಾಟಕದ ಅನೇಕ ಪೊಲೀಸ್ ಠಾಣೆಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿವೆ ಎಂಬುದು ಕಹಿ ಸತ್ಯ. ಈ ಭ್ರಷ್ಟಾಚಾರವನ್ನು ಹೋಗಲಾಡಿಸಲು ಸಾರ್ವಜನಿಕರು ಮತ್ತು ಯುವಕರು ಭಯವಿಲ್ಲದೆ, ಧೈರ್ಯದಿಂದ ಮುಂದೆ ಬಂದು ದೂರು ನೀಡುವ ಸಂಸ್ಕೃತಿಯನ್ನು ಬೆಳೆಸಬೇಕಿದೆ.ಜನರ ಸಹಕಾರವಿಲ್ಲದೆ ಲಂಚ ಮುಕ್ತ ವ್ಯವಸ್ಥೆ ಸಾಧ್ಯವಿಲ್ಲ.
ಟ್ರಾಪ್ ವೀಡಿಯೋ ವೈರಲ್: ಕುಟುಂಬಕ್ಕೆ ತೀವ್ರ ನೋವು – ಮಾನನಷ್ಟ ಮೊಕದ್ದಮೆಗೆ ಗೋವಿಂದರಾಜು ಚಿಂತನೆ...?
bigtvnews | Hubli Dharwad News | Kannada News | Karnataka News Hubli News | News In Hubli | Local news

