Breaking News

ಜಮಖಂಡಿ: ಮೊಬೈಲ್ ಟವರ್ ಏರಿ ಆತಂಕ ಸೃಷ್ಟಿಸಿದ ಕುಡುಕ!

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಆಲಗೂರಿನಲ್ಲಿ ವ್ಯಕ್ತಿಯೊಬ್ಬ ಸೋಮವಾರ ಮೊಬೈಲ್‌ ಟವರ್‌ ಏರಿ ಕೆಲಕಾಲ ಆತಂಕದ ವಾತಾವರಣವನ್ನುಂಟು ಮಾಡಿದ್ದನು. ಕುಡಿದ ಮತ್ತಿನಲ್ಲಿ ಟವರ್‌ ಏರಿ ನಿಂತಿದ್ದ ಎನ್‌. ಅರ್ಜುನ್‌, ತುತ್ತ ತುದಿಯಲ್ಲಿ ಎರಡು ಕೈಬಿಟ್ಟು ಎದ್ದು ನಿಂತಿದ್ದು ಆತಂಕಕ್ಕೆ ಕಾರಣವಾಗಿತ್ತು. ಅಲ್ಲಿಂದಲೇ ಕೆಳಗಿದ್ದವರ ಮೊಬೈಲ್‌ಗೆ ಫೋನ್‌ ಮಾಡಿ ಮಾತನಾಡುವುದಲ್ಲದೇ, ಸೆಲ್ಫಿಯನ್ನು ಹೊಡೆದುಕೊಳ್ಳುತ್ತಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅರ್ಧ ಗಂಟೆ ಕಾಲ ಅಲ್ಲಿಯೇ ಇದ್ದನು. ಕೆಳಗಿದ್ದ ಕೆಲವರು ಮೊಬೈಲ್‌ ಮೂಲಕ ಮಾತನಾಡಿ ಅರ್ಜುನ್‌ನನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.

Share News

About BigTv News

Check Also

80s ಫೋಟೋ ಟ್ರೆಂಡ್‌ನಲ್ಲೂ ಸೈಬರ್ ವಂಚಕರ ಕನ್ನ: ಹಣ ಕೊಡದಿದ್ದಕ್ಕೆ ಬೆತ್ತಲೆ ಫೋಟೋ ಹರಿಬಿಟ್ಟ ವಂಚಕರು

ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆಯ ವಿನೋದ್ (45) ಎಂಬುವರು 80ರ ದಶಕದ ಶೈಲಿಯಲ್ಲಿ ಫೋಟೋ ಎಡಿಟ್ ಮಾಡಲು ನಕಲಿ ಆ್ಯಪ್ …

Leave a Reply

Your email address will not be published. Required fields are marked *