Breaking News

ಬೆಳಗಾವಿಯಲ್ಲಿ ಹಲವೆಡೆ ವಾಹನ ಕಳ್ಳತನ ಮಾಡುತ್ತಿದ್ದ ನಾಲ್ವರ ಬಂಧನ: 18 ಬೈಕ್‌ ವಶ

ನಗರದಲ್ಲಿ ಹಲವೆಡೆ ವಾಹನ ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಗುರುವಾರ ಬಂಧಿಸಿರುವ ಪೊಲೀಸರು, 18 ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯ ಉಮೇಶ ಹನುಮಂತ ಬಾಗೇವಾಡಿ (33), ಗುಡಸ ಗ್ರಾಮದ ಮೌಲಾ ಹಸನಸಾಬ ಹಲಕರ್ಣಿ (42), ಕಂಗ್ರಾಳಿ ಕೆ.ಎಚ್.ಗ್ರಾಮದ ರಜತ ಸಂಜಯ ಶಿವಣಗೇಕರ (29) ಹಾಗೂ ಬೈಲಹೊಂಗಲ ತಾಲ್ಲೂಕಿನ ಶೀಗಿಹಳ್ಳಿ ಗ್ರಾಮದ ವಿಠ್ಠಲ ಸದೆಪ್ಪ ಆರೇರ (38) ಬಂಧಿತರು. ಸಿಸಿಬಿಯ ಸಿಪಿಐ ನಂದೀಶ್ವರ ಕುಂಬಾರ ಹಾಗೂ ಪಿಎಸ್‌ಐ ಮಂಜುನಾಥ ಭಜಂತ್ರಿ ಅವರು ನಡೆಸಿದ ಕಾರ್ಯಾಚರಣೆಯಲ್ಲಿ ವಿಠ್ಠಲ ಆರೇರ ಹಾಗೂ ರಜತ ಶಿವಣಗೇಕರನನ್ನು ಬಂಧಿಸಿ ₹1.20 ಲಕ್ಷ ಮೌಲ್ಯದ ಒಟ್ಟು 5 ಬೈಕ್ ವಶಪಡಿಸಿಕೊಳ್ಳಲಾಗಿದೆ. ಉಮೇಶ ಹಾಗೂ ಮೌಲಾ ಎನ್ನುವವರನ್ನು ಬಂಧಿಸಿದ ಸಿಪಿಐ ಯು.ಎಸ್. ಆವಟಿ ಅವರ ನೇತೃತ್ವದ ಎಪಿಎಂಸಿ ಠಾಣೆ ಪೊಲೀಸರು ಒಟ್ಟು ₹5.35 ಲಕ್ಷ ಮೌಲ್ಯದ ಬೈಕ್ ಗಳನ್ನು ವಶ ಪಡಿಸಿಕೊಂಡಿದ್ದಾರೆ.

Share News

About BigTv News

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *