Breaking News

ಸಂಚಾರಿ ಠಾಣೆಗಳಲ್ಲಿ ಇನ್ಸ್ಪೆಕ್ಟರ್‌ಗಳಿಗೆ ದಿನದ ‘ಹಫ್ತಾ’ ಫಿಕ್ಸ್: ಇದು ಪೊಲೀಸರ ‘ಜಿಎಸ್‌ಟಿ’ ವಸೂಲಿ ದಂಧೆ!

​ಟ್ರಾಫಿಕ್ ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರದ ಬೇರುಗಳು ಎಷ್ಟು ಆಳವಾಗಿ ಇಳಿದಿವೆ ಎಂದರೆ, ಈಗ ಪ್ರತಿ ಠಾಣೆಯ ಇನ್ಸ್ಪೆಕ್ಟರ್‌ಗಳ (Inspector) ಕೈ ಸೇರಲು ದಿನದ ಟಾರ್ಗೆಟ್ ನಿಗದಿಪಡಿಸಲಾಗಿದೆ…

ಕೆಳಹಂತದ ಅಧಿಕಾರಿಗಳಾದ ಎಎಸ್‌ಐ (ASI) ಮತ್ತು ಪಿಎಸ್‌ಐ (PSI) ಗಳು ಪ್ರತಿದಿನ ಸಂಗ್ರಹಿಸುವ ಲಂಚದ ಹಣದಲ್ಲಿ ಸಿಂಹಪಾಲು ನೇರವಾಗಿ ಇನ್ಸ್ಪೆಕ್ಟರ್‌ಗಳ ಜೇಬಿಗೆ ಸೇರುತ್ತಿದೆ…

ಎಂಬ ಆತಂಕಕಾರಿ ಮಾಹಿತಿ ಲಭ್ಯವಾಗಿದೆ.​ಇನ್ಸ್ಪೆಕ್ಟರ್‌ಗಳ ಸುಪರ್ದಿಯಲ್ಲಿ ಜಿಎಸ್‌ಟಿ ಮಾಫಿಯಾ….

ಈ ಇಡೀ ದಂಧೆಯನ್ನು ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್‌ಗಳೇ ನಿಯಂತ್ರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರತಿ ದಿನ ಸಂಜೆ ಅಥವಾ ಶಿಫ್ಟ್ ಮುಗಿಯುವಷ್ಟರಲ್ಲಿ ಒಬ್ಬ ಎಎಸ್‌ಐ ASI ಹಂತದ ಅಧಿಕಾರಿಗಳು ತಲಾ 1,000 ದಿಂದ 2,000 ರೂಪಾಯಿಗಳವರೆಗಿನ ಮೊತ್ತವನ್ನು ಕಡ್ಡಾಯವಾಗಿ ಇನ್ಸ್ಪೆಕ್ಟರ್‌ಗಳಿಗೆ ತಲುಪಿಸಬೇಕು….

ಈ ವಸೂಲಿಗೆ ಇಲಾಖೆಯ ಒಳಗಿನ ಭಾಷೆಯಲ್ಲಿ ‘ಜಿಎಸ್‌ಟಿ’ (GST) ಎಂಬ ಕೋಡ್ ವರ್ಡ್ ಇಡಲಾಗಿದೆ. ಯಾರು ಈ ನಿಗದಿತ ಮೊತ್ತವನ್ನು ತಲುಪಿಸುವುದಿಲ್ಲವೋ ಅವರಿಗೆ ಮುಂದಿನ ದಿನಗಳಲ್ಲಿ ಉತ್ತಮ ‘ಪೋಸ್ಟಿಂಗ್’ ಅಥವಾ ಕೆಲಸದ ಅವಧಿಯಲ್ಲಿ ರಿಯಾಯಿತಿ ಸಿಗುವುದಿಲ್ಲ ಎಂಬ ಬೆದರಿಕೆಯೂ ಇದೆ ಎನ್ನಲಾಗಿದೆ….

ಟ್ರಾಫಿಕ್ ಪೊಲೀಸ್ ​ವಸೂಲಿಗಾಗಿ ಸಾರ್ವಜನಿಕರ ಮೇಲೆ ದಬ್ಬಾಳಿಕೆ….

ಇನ್ಸ್ಪೆಕ್ಟರ್‌ಗಳು ನೀಡುವ ಈ ‘ದಿನದ ಗುರಿ’ಯನ್ನು ತಲುಪಲು ರಸ್ತೆಯಲ್ಲಿ ನಿಲ್ಲುವ ಕೆಳಹಂತದ ಪೊಲೀಸರು ಅಕ್ಷರಶಃ ಸಾರ್ವಜನಿಕರ ಮೇಲೆ ಮುಗಿಬೀಳುತ್ತಿದ್ದಾರೆ. ಪ್ರತಿಯೊಬ್ಬ ವಾಹನ ಸವಾರನಿಂದ ಏನಾದರೂ ಒಂದು ನೆಪದಲ್ಲಿ ಹಣ ಕೀಳಲೇಬೇಕು ಎಂಬ ಒತ್ತಡಕ್ಕೆ ಸಿಲುಕಿರುವ ಪೊಲೀಸರು, ಕಾನೂನು ಪಾಲನೆಗಿಂತ ಹೆಚ್ಚಾಗಿ ಹಣ ಸಂಗ್ರಹಣೆಯಲ್ಲೇ ಮಗ್ನರಾಗಿದ್ದಾರೆ….

ಮೇಲಧಿಕಾರಿಗೆ ಮಾಸಿಕ ಮಾಮೂಲಿ….? ಟ್ರಾಫಿಕ್ ಠಾಣೆಗಳಲ್ಲಿ ಇನ್ಸ್ಪೆಕ್ಟರ್‌ಗಳೇ ಮೇಲೆ ಒತ್ತಡದ ಆರೋಪ...​

ಇನ್ಸ್ಪೆಕ್ಟರ್‌ಗಳ ಈ ಅಲಿಖಿತ ನಿಯಮದಿಂದಾಗಿ ಸಂಚಾರಿ ಪೊಲೀಸ್ ವ್ಯವಸ್ಥೆಯು ಕೇವಲ ‘ಹಣ ಮಾಡುವ ಯಂತ್ರ’ವಾಗಿ ಬದಲಾಗಿದೆ. ಉನ್ನತ ಮಟ್ಟದ ಅಧಿಕಾರಿಗಳು ಕೂಡಲೇ ಈ ಬಗ್ಗೆ ನಿಗಾ ವಹಿಸಿ, ಪ್ರತಿ ಠಾಣೆಯಲ್ಲಿ ಇನ್ಸ್ಪೆಕ್ಟರ್‌ಗಳು ಹೂ ನಡೆಸುತ್ತಿರುವ ಈ ಪದ್ಧತಿಯನ್ನು ಕೊನೆಗಾಣಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ…

ತಕ್ಷಣ ಸಂಬಂಧಿತ ಅಧಿಕಾರಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಂಡು, ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಮಾನತು (ಸಸ್ಪೆಂಡ್) ಮಾಡಬೇಕು ಎಂಬ ಸಾರ್ವಜನಿಕ ಒತ್ತಾಯ ಕೇಳಿಬರುತ್ತಿದೆ…

ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದವರ ಮೇಲೆ ಕಠಿಣ ಕ್ರಮ ಜರುಗಿಸದೇ ಇದ್ದರೆ ತಪ್ಪುಗಳಿಗೆ ಉತ್ತೇಜನ ಸಿಗುತ್ತದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ…

ಶಿಸ್ತಿನ ನಿಯಮಗಳನ್ನು ಕಾಪಾಡಲು ಕಠಿಣ ಕ್ರಮವೇ ಪರಿಹಾರ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ…

Share News

About Shaikh BigTv

Check Also

ಚಿತ್ರದುರ್ಗ : ಮಗನ ಮೇಲಿನ ಹಲ್ಲೆಗೆ ಸೇಡು; ಯುವಕನ ಅಪಹರಿಸಿ ಕೊಲೆಗೈದು ಶವ ಹೂತಿಟ್ಟ ಮೂವರ ಬಂಧನ

ಚಿತ್ರದುರ್ಗ: ಮಗನ ಕಣ್ಣಿಗೆ ಹಲ್ಲೆ ಮಾಡಿದ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಗುರುಕಿರಣ್ ಎಂಬ ಯುವಕನನ್ನು ಅಪಹರಿಸಿ ಕೊಲೆ ಮಾಡಿ ಶವ …

Leave a Reply

Your email address will not be published. Required fields are marked *