Breaking News

ಭಾರತದಲ್ಲಿ ಅತಿಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ರಾಜ್ಯಗಳು

ಭಾರತದಲ್ಲಿ ಹಿಂದೂಗಳ ನಂತರ ಅತಿಹೆಚ್ಚು ಸಂಖ್ಯೆಯಲ್ಲಿ ಇರುವ ಸಮುದಾಯವೆಂದರೆ ಮುಸ್ಲಿಂ ಸಮುದಾಯ. ವರದಿಗಳ ಪ್ರಕಾರ, ಭಾರತದಲ್ಲಿ ಸುಮಾರು 14.2 ಶೇಕಡಾ ಜನಸಂಖ್ಯೆ ಮುಸ್ಲಿಮರಾಗಿದೆ.
1. ಅಸ್ಸಾಂ – 34.22%
ಭಾರತದಲ್ಲಿ ಅತಿಹೆಚ್ಚು ಪ್ರಮಾಣದ ಮುಸ್ಲಿಂ ಜನಸಂಖ್ಯೆ ಹೊಂದಿರುವ ರಾಜ್ಯ ಅಸ್ಸಾಂ. ಗುವಾಹಟಿ, ಸಿಲ್ಚಾರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮುಸ್ಲಿಂ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ 34.22 ಶೇಕಡಾ ಮಂದಿ ಮುಸ್ಲಿಮರು ಇದ್ದಾರೆ.
2. ಪಶ್ಚಿಮ ಬಂಗಾಳ – 27%
ಬಾಂಗ್ಲಾದೇಶ ಗಡಿಯನ್ನು ಹಂಚಿಕೊಂಡಿರುವ ಪಶ್ಚಿಮ ಬಂಗಾಳದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚು. ಒಟ್ಟು ಜನಸಂಖ್ಯೆಯ ಪೈಕಿ ಸುಮಾರು 27 ಶೇಕಡಾ ಮಂದಿ ಮುಸ್ಲಿಮರು.
3. ಕೇರಳ – 26.56%
ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಮೂರನೇ ಸ್ಥಾನದಲ್ಲಿದೆ. ವಯನಾಡ್‌, ಮಲಪ್ಪುರಂ ಮೊದಲಾದ ಜಿಲ್ಲೆಗಳಲ್ಲಿ ಮುಸ್ಲಿಂ ಸಮುದಾಯ ಹೆಚ್ಚು ಇದೆ.
ಕೇರಳದಲ್ಲಿ ಒಟ್ಟು ಜನಸಂಖ್ಯೆಯ 26.56 ಶೇಕಡಾ ಮಂದಿ ಮುಸ್ಲಿಮರು.
4. ಉತ್ತರ ಪ್ರದೇಶ – 19.26%
ದೇಶದ ಅತಿದೊಡ್ಡ ರಾಜ್ಯಗಳಲ್ಲಿ ಒಂದಾದ ಉತ್ತರ ಪ್ರದೇಶದಲ್ಲಿ ಸುಮಾರು 19.26 ಶೇಕಡಾ ಮಂದಿ ಮುಸ್ಲಿಮರು ವಾಸಿಸುತ್ತಿದ್ದಾರೆ.
ಅಂದಾಜು ನಾಲ್ಕು ಕೋಟಿಗೂ ಹೆಚ್ಚು ಮುಸ್ಲಿಂ ಜನಸಂಖ್ಯೆ ಇದೆ.
5. ಬಿಹಾರ – 16.9%
ಬಿಹಾರ ರಾಜ್ಯದಲ್ಲಿ ಒಟ್ಟು ಜನಸಂಖ್ಯೆಯ 16.9 ಶೇಕಡಾ ಮಂದಿ ಮುಸ್ಲಿಮರು ಇದ್ದಾರೆ.
ಅಂದಾಜು 1.76 ಕೋಟಿ ಮುಸ್ಲಿಂ ಜನಸಂಖ್ಯೆ ಇದೆ ಎಂದು ವರದಿಗಳು ತಿಳಿಸುತ್ತವೆ.

Share News

About BigTv News

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *