Breaking News

ದಾವಣಗೆರೆ ಜಿಲ್ಲಾ ಪೊಲೀಸ್‌ರ ಮೆಗಾ ಆಪರೇಶನ್ – 28 ವರ್ಷಗಳ ಬಳಿಕ ಆರೋಪಿಯ ಬಂಧನ!

ದಾವಣಗೆರೆ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಗ್ರಾಮಾಂತರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಸುಮಾರು 28 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೊನೆಗೂ ಪತ್ತೆಹಚ್ಚಿ ಬಂಧಿಸಿದ್ದಾರೆ.
ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಗುನ್ನೆ ನಂ: 188/1998 ಪ್ರಕರಣದಲ್ಲಿ, ಕಲಂ 454 ಹಾಗೂ 380 ಐಪಿಸಿ ಅಡಿ ದಾಖಲಾಗಿದ್ದ ಕಳ್ಳತನ ಪ್ರಕರಣದ ಆರೋಪಿತನು ದೀರ್ಘಕಾಲದಿಂದ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದನು.
ತೀವ್ರ ತನಿಖೆ ಮತ್ತು ನಿಖರ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಎಲ್.ಪಿ.ಆರ್ (Long Pending Report) ಪ್ರಕರಣದ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸುಮಾರು ಮೂರು ದಶಕಗಳ ಬಳಿಕ ನಡೆದ ಈ ಬಂಧನ, ಪೊಲೀಸ್ ಇಲಾಖೆಯ ನಿಷ್ಠೆ ಮತ್ತು ನಿರಂತರ ಕಾರ್ಯಪಟುತೆಗೆ ಸಾಕ್ಷಿಯಾಗಿದೆ.
ಹಳೆಯ ಪ್ರಕರಣಗಳನ್ನೂ ಬಿಟ್ಟುಕೊಡದ ಪೊಲೀಸ್ ಇಲಾಖೆ – ಆರೋಪಿಗಳಿಗೆ ಎಚ್ಚರಿಕೆ ಸಂದೇಶ!

Share News

About Shaikh BigTv

Check Also

ಬೆಚ್ಚಿಬಿದ್ದ ಯಾದಗಿರಿ; ಹಾಡಹಗಲೇ ಸಿನಿಮೀಯ ರೀತಿ ಪತ್ರಕರ್ತನ ಕಿಡ್ನಾಪ್!

ವಿಜಯಪುರ: ಹಾಡಹಗಲೇ ಪತ್ರಕರ್ತರೊಬ್ಬರ ಮೇಲೆ ಹಲ್ಲೆ ನಡೆಸಿ, ಕಾರಿನಲ್ಲಿ ಬಲವಂತವಾಗಿ ಅಪಹರಿಸಿಕೊಂಡು ಹೋದ ಘಟನೆ ನಗರದ ಲುಂಬಿನಿ ಪಾರ್ಕ್‌ ಎದುರು …

Leave a Reply

Your email address will not be published. Required fields are marked *