ಅಖಂಡ ಕರ್ನಾಟಕದಲ್ಲಿ ದ್ಕೊಂಡು ರಾಜಕೀಯಕ್ಕಾಗಿ ಪ್ರತ್ಯೇಕ ರಾಜ್ಯ ಕೇಳಿದ್ರೇ ಅವರೆಲ್ಲ ಈ ರಾಜ್ಯದ ದ್ರೋಹಿಗಳು ಅಂತ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವ್ರು, ಬೆರಳು ಸರಿಯಿಲ್ಲ ಅಂದ್ರೇ ಕೈಯನ್ನ ಕತ್ತರಿಸೋದು ಸರಿಯಲ್ಲ. ಸಾಕಷ್ಟು ಮಂದಿ ಹೋರಾಟ ಮಾಡಿಕೊಂಡು ಅಖಂಡ ಕರ್ನಾಟಕವನ್ನ ಕಟ್ಟಿದಾರೆ. ಕನ್ನಡ, ಕರ್ನಾಟಕ ಹಾಗೂ ಕನ್ನಡಿಗರು ಒಂದೇ. ಅದು ಹಾಗೇ ಇರಬೇಕು ಅನ್ನೋದು ನಮ್ಮ ಆಶಯ. ಅಭಿವೃದ್ಧಿಯಲ್ಲಿ ಹಿನ್ನಡೆಯಾದ್ರೇ ಅದಕ್ಕಾಗಿ ನ್ಯಾಯ ಕೇಳೋದು ಸರಿಯಿದೆ. ಹಾಗಂತಾ ಪ್ರತ್ಯೇಕ ರಾಜ್ಯ ಮಾಡ್ತೀವಿ ಅಂದ್ರೇ ಅದು ಸರಿಯಲ್ಲ. ಸ್ಮಾರ್ಟ್ ಸಿಟಿ, ಬಿಆರ್ ಟಿಎಸ್ ಹಾಗೂ ನಿರಂತರ ಕುಡಿಯೋ ನೀರಿನ ಯೋಜನೆ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸಗಳು ಈ ಭಾಗದಲ್ಲಾಗಿವೆ. ಹಾಗಾಗಿ ನಾವೆಲ್ಲ ಕರ್ನಾಟಕವನ್ನ ಜೋಡಣೆ ಮಾಡೋ ಬಗ್ಗೆ ಮಾತನಾಡಬೇಕು ಅಂದ್ರು. ಇದೇ ವೇಳೆ ಆಗಸ್ಟ್ 12ರಂದು ಸಿಎಂ ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ 63 ಸಾವಿರ ಮನೆಗಳ ನಿರ್ಮಾಣಕ್ಕೆ ಚಾಲನೆ ನೀಡಲಿದಾರೆ ಅಂದ್ರು.
ಯು.ಟಿ ಖಾದರ್, ಸಚಿವ, ವಸತಿ ಹಾಗೂ ನಗರಾಭಿವೃದ್ಧಿ ಇಲಾಖೆ
bigtvnews | Hubli Dharwad News | Kannada News | Karnataka News Hubli News | News In Hubli | Local news





