Breaking News

ಹಾಸನ :ಡೋರ್‌ನಲ್ಲೇ ನಿಂತಿದ್ದ ಮಹಿಳೆ ಒಳಗೆ ಕಳುಹಿಸಿದ್ದಕ್ಕೆ ಚಾಲಕನಿಗೆ ಥಳಿತ!

ಹಾಸನದಿಂದ ಅರಸೀಕೆರೆಗೆ ತೆರಳುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಈ ಘಟನೆ ಸಂಭವಿಸಿದೆ. ಬಸ್‌ ಸಂಪೂರ್ಣ ಭರ್ತಿಯಾಗಿದ್ದ ಕಾರಣ ದುದ್ದ ಗ್ರಾಮದಲ್ಲಿ ಹತ್ತಿದ ಖಾಸಗಿ ಶಾಲೆಯ ಟೀಚರ್‌ ಮೆಟ್ಟಿಲಿನ ಮೇಲೆಯೇ ನಿಂತು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಿದರಿಂದ ಬಾಗಿಲು ಹಾಕಲು ನಿರ್ವಾಹಕ ಪರದಾಡುತ್ತಿದ್ದರು ಎಂದು ತಿಳಿದುಬಂದಿದೆ. ಈ ವೇಳೆ ಚಾಲಕ ಸೀಟ್‌ನಿಂದ ಇಳಿದು ಬಂದು ಮಹಿಳೆಯನ್ನು ಒಳಕ್ಕೆ ತಳ್ಳಿ ಬಾಗಿಲು ಹಾಕಿದನೆಂಬ ಆರೋಪ ಕೇಳಿಬಂದಿದೆ. ಇದನ್ನು ಪ್ರಶ್ನಿಸಿದ ಮಹಿಳೆ ಹಾಗೂ ಚಾಲಕ ನಿರ್ವಾಹಕರ ನಡುವೆ ವಾಗ್ವಾದ ನಡೆದಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಎಂದು ಮಹಿಳೆ ತನ್ನ ಪತಿಗೆ ಮೊಬೈಲ್‌ ನಂಬರ್‌ ಕರೆ ಮಾಡಿ ತಿಳಿಸಿದ್ದಾಳೆ ಎನ್ನಲಾಗಿದೆ. ಈ ವೇಳೆ ಬಸ್‌ ಬರುವುದನ್ನೇ ಬಾಗೇಶಪುರದಲ್ಲಿ ಗ್ಯಾಂಗ್ ಕಟ್ಟಿಕೊಂಡು ಕಾಯುತ್ತಿದ್ದ ಶಿಕ್ಷಕಿಯ ಪತಿ ಹಾಗೂ ಕೆಲವರು ಚಾಲಕನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಬಸ್‌ನ ಕಿಟಕಿಗಳ ಗಾಜುಗಳನ್ನು ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯಿಂದ ಕೆಲಕಾಲ ಬಾಗೇಶಪುರದಲ್ಲಿ ಸಂಚಾರ ವ್ಯತ್ಯಯ ಉಂಟಾಯಿತು. ಚಾಲಕನಿಗೆ ಹಿಗ್ಗಾಮಗ್ಗಾ ಥಳಿಸಿದ್ದರಿಂದ ಆತನ ಮುಖ ಊದಿಕೊಂಡಿದೆ. ಗಾಯಗೊಂಡ ಚಾಲಕನನ್ನು ಅರಸೀಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಪರಿಶೀಲನೆ ನಡೆಸಿದ್ದು, ಯಾವುದೇ ಪ್ರಕರಣ ದಾಖಲಿಸಿಲ್ಲ.

Share News

About BigTv News

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *