ದಾವಣಗೆರೆ : ಅಗ್ನಿ ಅವಘಡಕ್ಕೆ ಬೆಣ್ಣೆ ದೋಸೆ ಹೋಟೆಲ್ ಸುಟ್ಟು ಭಸ್ಮವಾಗಿದೆ. ಪ್ರಸಿದ್ದ ಶ್ರೀ ಕೊಟ್ಟೂರೇಶ್ವರ ಹೋಟೆಲ್, ಸಂಪೂರ್ಣವಾಗಿ ಸುಟ್ಟು ಬಸ್ಮವಾಗಿದೆ. ದಾವಣಗೆರೆಯ ಡೆಂಟಲ್ ಕಾಲೇಜು ಬಳಿ ಈ ಒಂದು ಘಟನೆ ನಡೆದಿದೆ. ಹೋಟೆಲ್ ಕ್ಲೋಸ್ ಆಗಿದ್ದರಿಂದ ಭಾರಿ ಅನಾಹುತ ಒಂದು ತಪ್ಪಿದೆ. ಹೋಟೆಲ್ ನಲ್ಲಿ ಇದ್ದಂತಹ ವಸ್ತುಗಳೆಲ್ಲವೂ ಸುಟ್ಟು ಭಸ್ಮವಾಗಿವೆ. ದಾವಣಗೆರೆ ನಗರದಲ್ಲಿರುವ ಅತ್ಯಂತ ಹಳೆಯ ಹೋಟೆಲ್ ಎಂದು ಪ್ರಸಿದ್ಧವಾಗಿದ್ದು, ಕೊಟ್ಟೂರೇಶ್ವರ ಹೋಟೆಲ್ ಇದೀಗ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

