ಪರ್ಫ್ಯೂಮ್ ಗೋದಾಮಿನಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಿಂದ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ನೆಲಮಂಗಲ ರಸ್ತೆಯ ಮಾಕಳಿ ಬಳಿ ಈ ದುರ್ಘಟನೆ ಸಂಭವಿಸಿದ್ದು, ಗೋದಾಮು ಧಗಧಗ ಹೊತ್ತಿ ಉರಿದಿದೆ. ಮುಗಿಲೆತ್ತರಕ್ಕೆ ಜ್ವಾಲೆಗಳು ಹಬ್ಬಿ, ಭಾರೀ ಸ್ಫೋಟದಂತ ಶಬ್ದಗಳು ಕೇಳಿಬಂದಿವೆ. ಬೆಂಕಿ ಕಾಣುತ್ತಿದ್ದಂತೆಯೇ ಗೋದಾಮಿನಲ್ಲಿದ್ದ 40 ಸಿಬ್ಬಂದಿ ತಕ್ಷಣ ಹೊರಗೆ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಗ್ನಿ ಅವಘಡದ ತೀವ್ರತೆ ಹೆಚ್ಚಾಗಿ, ಪಕ್ಕದಲ್ಲಿದ್ದ ಎಸಿ ಗೋಡೌನ್‌ಗೂ ಬೆಂಕಿ ತಗುಲಿದೆ. ಅಲ್ಲಿದ್ದ ಹಲವು ವಾಹನಗಳು ಸುಟ್ಟು ಕರಕಲಾಗಿವೆ ಎನ್ನಲಾಗಿದೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಿಯಂತ್ರಣಕ್ಕೆ ಹರಸಾಹಸಪಡುತ್ತಿದ್ದಾರೆ. ಅಗ್ನಿ ಅವಘಡದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಹೆಚ್ಚಿನ ತನಿಖೆ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

