Breaking News

ಉಚಿತ ಟಿಕೆಟ್ ಗೆ ಹಿಂದೂ ಹೆಸರಿನ ಆಧಾರ್ ಕಾರ್ಡ್ ತೋರಿಸಿ ವಂಚಿಸಿದ ಬುರ್ಖಾ ಧರಿಸಿದ ಮಹಿಳೆ: ವಿಡಿಯೋ ವೈರಲ್

ಬೆಂಗಳೂರು: ಉಚಿತ ಬಸ್ ಟಿಕೆಟ್ ಗಾಗಿ ಹಿಂದೂ ಮಹಿಳೆಯ ಹೆಸರಿರುವ ಆಧಾರ್ ಕಾರ್ಡ್ ತೋರಿಸಿ ಮುಸ್ಲಿಂ ಮಹಿಳೆ ವಂಚಿಸಿದ್ದಾಳೆ ಎನ್ನಲಾದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕರ್ನಾಟಕದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ ಶಕ್ತಿ ಯೋಜನೆಯಲ್ಲಿ ಹಲವು ವಂಚನೆಗಳೂ ಕೇಳಿಬರುತ್ತಿವೆ.ಇದಕ್ಕೆ ಲೇಟೆಸ್ಟ್ ಸೇರ್ಪಡೆ ಈ ಮಹಿಳೆಯ ಪ್ರಕರಣ. ಮುಸ್ಲಿಂ ಮಹಿಳೆಯೊಬ್ಬರು ಬಸ್ ನಲ್ಲಿ ಪ್ರಯಾಣಿಸುವಾಗ ಉಚಿತ ಟಿಕೆಟ್ ಗಾಗಿ ಆಧಾರ್ ಕಾರ್ಡ್ ಒಂದನ್ನು ಕಂಡಕ್ಟರ್ ಗೆ ತೋರಿಸುತ್ತಾರೆ. ಆದರೆ ಆಧಾರ್ ಕಾರ್ಡ್ ನಲ್ಲಿ ಲಕ್ಷ್ಮಮ್ಮ ಎಂದು ಹಿಂದೂ ಮಹಿಳೆಯ ಹೆಸರು ಇರುತ್ತದೆ. ಇತ್ತ ಮಹಿಳೆ ನೋಡಿದರೆ ಬುರ್ಕಾ ಹಾಕಿ ಮುಸ್ಲಿಂ, ಆಧಾರ್ ಕಾರ್ಡ್ ನಲ್ಲಿ ಹಿಂದೂ ಹೆಸರು ನೋಡಿ ಕಂಡಕ್ಟರ್ ಗೆ ಅನುಮಾನವಾಗುತ್ತದೆ. ಹೀಗಾಗಿ ಮಹಿಳೆಯನ್ನು ವಿಚಾರಿಸಿದಾಗ ಆಕೆ ಯಾರದ್ದೋ ಕಾರ್ಡ್ ತೋರಿಸಿರುವುದು ಖಚಿತವಾಗುತ್ತದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದೂ ಕೂಡಾ ಫೋರ್ಜರಿಗೆ ಸಮನಾದ ವಂಚನೆಯಾಗಿದೆ. ಇದರ ವಿರುದ್ಧ ತಕ್ಕ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

Share News

About BigTv News

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *