Breaking News

ಕುಖ್ಯಾತ ಅಂತರ್‌ಜಿಲ್ಲಾ ದ್ವಿಚಕ್ರವಾಹನ ಕಳ್ಳನ ಬಂಧನ – ₹20 ಲಕ್ಷ ಮೌಲ್ಯದ 12 ಬೈಕ್‌ಗಳ ಜಪ್ತಿ

ಹುಬ್ಬಳ್ಳಿ ಕೇಶ್ವಾಪೂರ ಪೊಲೀಸ್ ಠಾಣೆಯ ಗುನ್ನಾ ನಂ. 11/2026 ಕಲಂ 303(2) ಬಿಎನ್‌ಎಸ್–2023 ಪ್ರಕರಣಕ್ಕೆ ಸಂಬಂಧಿಸಿದಂತೆ, ಕುಖ್ಯಾತ ಅಂತರ್‌ಜಿಲ್ಲಾ ದ್ವಿಚಕ್ರವಾಹನ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಶಶಿಕುಮಾರ ಎನ್. ಐಪಿಎಸ್, ಉಪ ಪೊಲೀಸ್ ಆಯುಕ್ತರಾದ ಶ್ರೀ ರವೀಶ (ಅಪರಾಧ ವಿಭಾಗ) ಹಾಗೂ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಶಿವಾನಂದ ಚಲವಾದಿ ಅವರ ಮಾರ್ಗದರ್ಶನದಲ್ಲಿ, ಕೇಶ್ವಾಪೂರ ಪೊಲೀಸ್ ಠಾಣೆಯ ಪಿಐ ಶ್ರೀ ಕೆ.ಎಸ್. ಹಟ್ಟಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಆರೋಪಿ ಸಯ್ಯದ್ ಅಲಿ @ ಹರ್ಷಾ @ ಹರ್ಷವರ್ಧನ ತಂದೆ ಬಾಲೆಸಾಬ ನದಾಫ್ (27 ವರ್ಷ), ವೃತ್ತಿ ಮೆಕ್ಯಾನಿಕ್, ಸಾ: ಹುಲ್ಲೂರು ಗ್ರಾಮ, ತಾ: ಲಕ್ಷೇಶ್ವರ, ಜಿ: ಗದಗ ಎಂಬಾತನನ್ನು ಬಂಧಿಸಿ, ಅವನಿಂದ ಒಟ್ಟು ₹20 ಲಕ್ಷ ಮೌಲ್ಯದ 12 ದ್ವಿಚಕ್ರವಾಹನಗಳನ್ನು ಜಪ್ತಿ ಮಾಡಲಾಗಿದೆ. ಜಪ್ತಿಯಾದ ವಾಹನಗಳಲ್ಲಿ 7 ರಾಯಲ್ ಎನ್‌ಫೀಲ್ಡ್, 2 ಎನ್‌ಟಾರ್ಕ್, 1 ಹೊಂಡಾ ಡಿಯೋ, 1 ಯಮಾಹಾ ಹಾಗೂ 1 ಬಜಾಜ್ ಪಲ್ಸರ್ ಸೇರಿವೆ. ಆರೋಪಿಯು ಬೆಂಗಳೂರು, ಬೆಳಗಾವಿ ಹಾಗೂ ಹುಬ್ಬಳ್ಳಿ ನಗರಗಳಲ್ಲಿ ಈ ದ್ವಿಚಕ್ರವಾಹನಗಳನ್ನು ಕಳ್ಳತನ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ.

Share News

About Shaikh BigTv

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *