Breaking News

ಕಂದಾಯ ಸಚಿವ ಆರ್‌ ಅಶೋಕಗೆ ಕೊವಿಡ್‌ ದೃಢ

ಬೆಂಗಳೂರು: ಕಂದಾಯ ಸಚಿವ ಆರ್. ಅಶೋಕ್‍ಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಅಶೋಕ್ ಅವರಿಗೆ ಕೊರೊನಾ ಸೋಂಕು ತಗಲಿರುವ ಹಿನ್ನೆಲೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಗುರುವಾರ ಇದ್ದ ಬಿಜೆಪಿ ಕ್ಯಾಬಿನೆಟ್ ಸಭೆಗೂ ಸಹ ಅಶೋಕ್ ಅವರು ಗೈರಾಗಿದ್ದರು.

ಎರಡು ದಿನದ ಹಿಂದೆ ಅಂದರೆ ಜನವರಿ 5 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇತರೆ ಸಚಿವರೊಂದಿಗೆ ಕಚೇರಿಯಲ್ಲಿ ಕೊರೊನಾ ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಜನ ಸಾಮಾನ್ಯರಿಗೆ ಕೊರೊನಾ ಬಂದರೆ ಪ್ರಾಥಮಿಕ ದ್ವಿತೀಯ ಸಂಪರ್ಕಿತರಿಗೆ ಏಳು ದಿನ ಕ್ವಾರಂಟೈನ್ ಮತ್ತು ಟೆಸ್ಟಿಂಗ್ ಇದೆ. ಸದ್ಯ ಅಶೋಕ್ ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದ ಸಿಎಂ ಮತ್ತು ಇನ್ನಿತರ ಸದಸ್ಯರು ಕ್ವಾರಂಟೈನ್ ಆಗಲಿದ್ದಾರಾ ಕಾದು ನೋಡಬೇಕಾಗಿದೆ.

ರಾಜ್ಯದಲ್ಲಿ ಕೊರೊನಾ ದಿನದಿಂದ ದಿನೇ ಕೊರೊನಾ ಹೆಚ್ಚಾಗುತ್ತಿದೆ. ಈ ಮಧ್ಯೆ ಸೋಂಕು ನಿಯಂತ್ರಿಸಲು ಸರ್ಕಾರ ರಾಜ್ಯದಲ್ಲಿ ನೈಟ್ ಕರ್ಫ್ಯೂ ವಿಧಿಸಿದ್ದು, ಶುಕ್ರವಾರ ರಾತ್ರಿ 10ಗಂಟೆಯಿಂದ ಸೋಮವಾರ ಬೆಳಗಿನ ಜಾವ 5 ಗಂಟೆಯವರೆಗೂ ಕರ್ಫ್ಯೂ ಘೋಷಿಸಿದೆ.

Share News

About admin

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *