Breaking News

ಯೋಗ ರಾಗಿಣಿಯ ಯೋಗಾಸನದ ಭಂಗಿಯ ಪೋಟೋ ಪುಲ್‌ ವೈರಲ್‌

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಗಿಣಿ ದ್ವಿವೇದಿ ಅವರು ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಆರೋಗ್ಯಕ್ಕೂ ಸಾಕಷ್ಟು ಸಮಯ ಕೊಡುತ್ತಾರೆ. ಮೊನ್ನೆಯಷ್ಟೇ ಅವರು ಯೋಗ ಮಾಡುತ್ತಿರುವ ವೀಡಿಯೋವೊಂದನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ನಟಿಯ ಯೋಗ ಲುಕ್ ಸಖತ್ ಗ್ಲಾಮರಸ್ ಆಗಿ ಬಂದಿದೆ. ರಾಗಿಣಿ ಲುಕ್ ಇಂಟರ್‍ನೆಟ್‍ನಲ್ಲಿ ಹವಾ ಎಬ್ಬಿಸುತ್ತು.

ಸದಾ ಒಂದಲ್ಲಾ ಒಂದು ಪೋಟೋಶೂಟ್‍ನಿಂದ ಪಡ್ಡೆ ಹುಡುಗರ ನಿದ್ದೆಗೆಡಿಸುವ ನಟಿ ರಾಗಿಣಿ ಈ ಬಾರಿ ಯೋಗ ಲುಕ್ ಮೂಲಕ ಗಮನ ಸೆಳೆದಿದ್ದಾರೆ. ಹಲವು ಯೋಗಗಳನ್ನು ಮಾಡಿ ಅವುಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.


ರಾಗಿಣಿ ಬ್ಯೂಟಿಗೆ ಮತ್ತು ಫಿಟ್‍ನೆಸ್‍ಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಫಿಟ್ ಆಗಿರಬೇಕು ಎಂದು ಅವರು ಪ್ರತಿದಿನ ವ್ಯಾಯಾಮ ಮಾಡುತ್ತಾರೆ. ಯೋಗದ ಬಗ್ಗೆ ಅಪಾರ ಒಲವು ಬೆಳೆಸಿಕೊಂಡಿರುವ ಅವರು, ಫಿಟ್ ನೆಸ್ ಗೆ ಯೋಗವೂ ಒಂದು ಕಾರಣ ಎನ್ನುತ್ತಾರೆ.
ಇದೀಗ ತಮ್ಮ ಫಿಟ್‍ನೆಸ್ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಯೋಗ ಮಾಡ್ತಿರುವ ವೀಡಿಯೋ ಶೇರ್ ಮಾಡುವ ಮೂಲಕ ತಾವೆಷ್ಟು ಫಿಟ್ ಎಂಬುದನ್ನ ನಟಿ ತಿಳಿಸಿದ್ದಾರೆ. ಜೊತೆಗೆ ಇತರರು ಯೋಗ ಮಾಡಲು ಅವರು ಪ್ರೇರೇಪಿಸಿದ್ದಾರೆ.
ಕನ್ನಡ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ನಟಿ ರಾಗಿಣಿ ಬ್ಯುಸಿಯಾಗಿದ್ದಾರೆ. ಜೊತೆಗೆ ಅವರು ಜೈಲಿಗೆ ಹೋಗಿ ಬಂದ ದಿನಗಳ ಬಗ್ಗೆ ಪುಸ್ತಕ ಬರೆಯುವುದಾಗಿ ಹೇಳಿ ಸಾಕಷ್ಟು ಕುತೂಹಲ ಮೂಡಿಸಿದ್ದಾರೆ.
ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಬಹುಭಾಷಾ ಕಲಾವಿದೆಯಾಗಿ ರಾಗಿಣಿ ಮಿಂಚಿದ್ದಾರೆ. ಬಾಲಿವುಡ್ ಅಂಗಳಕ್ಕೂ ನಟಿ ಲಗ್ಗೆ ಇಟ್ಟಿದ್ದಾರೆ. ಅಲ್ಲದೇ ಮೊನ್ನೆಯಷ್ಟೇ ಅವರು ಮೂರನೇ ಮಲಯಾಳಂ ಚಿತ್ರದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ.
ಶಂಭೋ ಶಿವ ಶಂಕರ ಚಿತ್ರ ನಿರ್ದೇಶಿಸಿದ್ದ ಶಂಕರ್ ಕೋನಮಾನಹಳ್ಳಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ವಿಭಿನ್ನ ಕಥಾಹಂದರ ಹೊಂದಿರುವ ಇವರು ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಖ್ಯಾತ ನಟಿ ರಾಗಿಣಿ ದ್ವಿವೇದಿ ಅಭಿನಯಿಸುತ್ತಿದ್ದಾರೆ. ನಾಯಕನಾಗಿ ಆರ್ ಕೆ ಚಂದನ್ ನಟಿಸುತ್ತಿದ್ದಾರೆ.

Share News

About BigTv News

Check Also

ರೌಡಿಶೀಟರ್ ಜೊತೆ ಶಾಸಕನ ಬರ್ತ್‌ಡೇ ಸಂಭ್ರಮ..!ಕಳೆದ ವರ್ಷ ಪಿಐ ಸಸ್ಪೆಂಡ್… ಈ ವರ್ಷ ಶಾಸಕರ ಎಂಟ್ರಿಗೆ ಭಾರೀ ವಿವಾದ..!

ರೌಡಿಶೀಟರ್ ಜೊತೆ ಬಿಜೆಪಿ ಶಾಸಕ..!ಪಿಐಗೆ ಅಮಾನತು… ಶಾಸಕರ ಭೇಟಿ ವೈರಲ್..! ಬೆಂಗಳೂರು: ಕಳೆದ ವರ್ಷ ಇದೇ ರೌಡಿಶೀಟರ್‌ನ ಹುಟ್ಟುಹಬ್ಬದ ಸಂಭ್ರಮದಲ್ಲಿ …

Leave a Reply

Your email address will not be published. Required fields are marked *