Breaking News

ದಾವಣಗೆರೆ :ತಳ್ಳು ಗಾಡಿ ಹೊಟೇಲ್ ನಡೆಸುತ್ತಿದ್ದ ಮಣಿಕಂಠನ ಹತ್ಯೆ!!

ರಸ್ತೆಯಲ್ಲಿ ತಳ್ಳು ಗಾಡಿಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಪಡ್ಡು, ಚಿತ್ರನ್ನ, ವಡೆ ಸೇರಿದಂತೆ ತಿಂಡಿ ತಿನಿಸುಗಳನ್ನು ರಾತ್ರಿ ವೇಳೆ ಉಣಬಡಿಸುವ ವ್ಯವಹಾರ ನಡೆಸುತ್ತಿದ್ದ ಹೊನ್ನಾಳಿ ಮೂಲದ ಮಣಿಕಂಠ ಅಲಿಯಾಸ್ ಮಣಿ ಸಾವು ಸ್ನೇಹಿತರಿಗೆ ಆಘಾತ ತಂದಿದೆ.ಮಣಿಕಂಠನ ಪತ್ನಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಣಿಕಂಠನ ಇಬ್ಬರ ಸ್ನೇಹಿತರ ವಿರುದ್ಧ ಆರೋಪ ಮಾಡಿದ್ದಾರೆ.ಗಣೇಶ ಎಂಬುವವರು ಮಣಿಕಂಠನ ಪತ್ನಿ ಅವರಿಗೆ ನಿನ್ನ ಮೈದುನನಾದ ಅಣ್ಣಪ್ಪ ನನಗೆ ಫೋನ್ ಮಾಡಿದ್ದ. ನಿನ್ನ ಗಂಡ ಮಣಿಕಂಠನನ್ನು ಸಾಸಲು ಹಳ್ಳ ಗ್ರಾಮದ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಕೊಲೆಯಾಗಿದ್ದಾನೆ ಎಂದು ತಿಳಿಸಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.ಕೂಡಲೆ ಮಣಿಕಂಠನ ಪತ್ನಿ ಮತ್ತು ಸಂಬಂಧಿಕರೆಲ್ಲರೂ ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ರಕ್ತಸಿಕ್ತವಾಗಿ ಮಣಿಕಂಠನ ಮೃತದೇಹ ಪತ್ತೆಯಾಗಿದೆ. ಪಾರ್ಕಿಂಗ್ ಕಲ್ಲುಗಳಿಂದ ಮಣಿಕಂಠನ ಮುಖ, ತಲೆಗೆ ಬರ್ಬರವಾಗಿ ಜಜ್ಜಿ ಹತ್ಯೆ ಮಾಡಿರುವುದು ಗೊತ್ತಾಗಿದೆ.

Share News

About BigTv News

Check Also

ದೀಪಾವಳಿ ಹಬ್ಬದ ದಿನವೇ ಕುಟುಂಬಸ್ಥರು ಕಣ್ಣೀರು! ಅಡ್ಡಾದಿಡ್ಡಿ ಕಾರು ಚಲಾಯಿಸಿ ಬೈಕ್​ ಸವಾರನ ಪ್ರಾಣ ತೆಗೆದ ಮಹಿಳೆ ಪರಾರಿ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಮಹಿಳೆಯೊಬ್ಬರು ವೇಗವಾಗಿ ಚಲಾಯಿಸುತ್ತಿದ್ದ ಮಹೀಂದ್ರಾ ಥಾರ್ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ 55 ವರ್ಷದ …

Leave a Reply

Your email address will not be published. Required fields are marked *