ಶಕ್ತಿ ಯೋಜನೆಯಿಂದ ನಷ್ಟಾಕ್ಕೊಳಗಾಗಿರುವ ಸಾರಿಗೆ ನಿಗಮಗಳಿಗೆ ಶಕ್ತಿ ತುಂಬುವ ಕೆಲಸ ಸರ್ಕಾರ ಮಾಡಿದೆ. ನಾಲ್ಕು ಸಾರಿಗೆ ನಿಗಮಗಳಾದ ಕೆ ಎಸ್ ಆರ್ ಟಿ ಸಿ, ಬಿ ಎಂ ಸಿ ಟಿ ಇತ್ಯಾದಿ ಸಾರಿಗೆ ನಿಗಮಗಳಿಗೆ ರಾಜ್ಯ ಸರ್ಕಾರ 541 ಕೋಟಿ ತೆರಿಗೆ ವಿನಾಯಿತಿ ಘೋಷಿಸಿದೆ ಇದರಿಂದ ನಷ್ಟಾಕ್ಕೊಲಗಾಗಿರುವ ಸಾರಿಗೆ ಸಂಸ್ಥೆಗೆ ಸ್ವಲ್ಪ ರಿಲ್ಯಾಕ್ಸ್ ಮೂಡಿದೆ. ನಾಲ್ಕು ನಿಗಮಗಳಿಗೆ ಒಂದು ವರ್ಷದಲ್ಲಿ ಒಟ್ಟು 541.87 ಕೋಟಿ ರೂ ನಷ್ಟು ಮೋಟಾರು ವಾಹನ ತೆರಿಗೆಯಲ್ಲಿ ವಿನಾಯಿತಿ ಸಿಗಲಿದ್ದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರಸ್ತಾಪಿಸಿರುವ ಈ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





