ಬೆಂಗಳೂರು: ವಿದೇಶಕ್ಕೆ ಪ್ರವಾಸಕ್ಕೆ ಕರೆದೊಯ್ಯುವುದಾಗಿ ನಂಬಿಸಿ, ವಿವಿಧೆಡೆಯ ಹತ್ತಾರು ಜನರಿಂದ ಹಣ ಪಡೆದು ವಂಚಿಸಿದ್ದ ಆರೋಪಿಯನ್ನು 4 ವರ್ಷಗಳ ಬಳಿಕ ಕಮರ್ಷಿಯಲ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್ ನಿವಾಸಿ ಸುರೇಶ್ ಚಂದ್ರ (42) ಬಂಧಿತ. ವಂಚನೆಗೊಳಗಾದವರು 4 ವರ್ಷಗಳ ಹಿಂದೆ ದೂರು ನೀಡಿದ್ದರು. ಆದರೆ, ಆರೋಪಿಯ ಸುಳಿವು ಸಿಕ್ಕಿರಲಿಲ್ಲ. ಇದೀಗ ಖಚಿತ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು. ಇಸ್ರೇಲ್, ಈಜಿಫ್ಟ್ ಸೇರಿ ವಿದೇಶಗಳಿಗೆ ಪ್ರವಾಸ ಕರೆದೊಯ್ಯುವುದಾಗಿ ಆರೋಪಿ ನಂಬಿಸುತ್ತಿದ್ದ. ಕಮರ್ಷಿಯಲ್ ಸ್ಟ್ರೀಟ್ ವ್ಯಾಪ್ತಿಯ 20ಕ್ಕೂ ಹೆಚ್ಚು ಜನರಿಗೆ ಒಟ್ಟು 18 ಲಕ್ಷ ರೂ. ಪಡೆದು ವಂಚಿಸಿದ್ದ. ಆರೋಪಿ ವಿರುದ್ಧ ಬೆಂಗಳೂರು, ಚಿತ್ರದುರ್ಗ ವಿವಿಧ ಠಾಣೆಗಳಲ್ಲಿ 11 ಕೇಸ್ ದಾಖಲಾಗಿದ್ದವು.
bigtvnews | Hubli Dharwad News | Kannada News | Karnataka News Hubli News | News In Hubli | Local news

