Breaking News

ಬಾಗಲಕೋಟೆ : ಹಳೆಯ ದ್ವೇಷದ ಹಿನ್ನೆಲೆ; ಯುವಕನಿಗೆ ಚಾಕು ಇರಿದು ಕೊಲೆ ಮಾಡಿದ ಅಪ್ರಾಪ್ತ ಬಾಲಕ

ಬಳ್ಳಾರಿಯ ಗುರುಕುಲದಲ್ಲಿ 9ನೇ ತರಗತಿಯ ವಿದ್ಯಾರ್ಥಿಯ ಕೊಲೆ ಪ್ರಕರಣ ಇನ್ನೂ ಹಸಿರಾಗಿರುವಾಗಲೇ, ಬಾಗಲಕೋಟೆಯಲ್ಲಿ ಅಪ್ರಾಪ್ತ ಬಾಲಕನೊಬ್ಬ ಯುವಕನನ್ನು ಕೊಲೆ ಮಾಡಿದ ಘಟನೆ ವರದಿಯಾಗಿದೆ. 16 ವರ್ಷದ ಅಪ್ರಾಪ್ತ ಬಾಲಕ ಮತ್ತು ಮೃತ ರಾಹುಲ್ ಬಾಹುಬಲಿ ಸಪ್ತಸಾಗರ (19 ವರ್ಷ) ಎಂಬುವವರ ನಡುವೆ ಹೋಳಿ ಹಬ್ಬದ ದಿನದಂದು ಜಗಳ ನಡೆದಿತ್ತು. “ಈ ಜಗಳದಲ್ಲಿ ನಾನೇ ರಾಹುಲ್‌ನಿಗೆ ಹೊಡೆದಿದ್ದೇನೆ” ಎಂದು ಈ ಬಾಲಕ ತನ್ನ ಸ್ನೇಹಿತರು ಮತ್ತು ಗೆಳತಿಯ ಮುಂದೆ ಬಡಾಯಿ ಕೊಚ್ಚಿಕೊಂಡಿದ್ದನು. ಬಾಲಕನ ಈ ವರ್ತನೆಯಿಂದ ರಾಹುಲ್ ತೀವ್ರ ಆಕ್ರೋಶಗೊಂಡಿದ್ದನು. ಬಳಿಕ ರಾಹುಲ್ ಈ ಅಪ್ರಾಪ್ತ ಬಾಲಕನನ್ನು ‘ಮಾತನಾಡಬೇಕು’ ಎಂದು ಹೇಳಿ ದೇವಸ್ಥಾನದ ಬಳಿ ಕರೆಸಿದನು. ಚರ್ಚೆಯ ಸಮಯದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಸ್ಥಳದಲ್ಲಿ ಉಪಸ್ಥಿತರಿದ್ದ ಸ್ನೇಹಿತರು ಜಗಳ ಬಿಡಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಆ ಅಪ್ರಾಪ್ತ ಬಾಲಕನು ಚಾಕುವಿನಿಂದ ರಾಹುಲ್‌ನ ಕುತ್ತಿಗೆಗೆ ಇರಿದು ಕೊಲೆ ಮಾಡಿದನು. ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕನನ್ನು ಬಂಧಿಸಿದ್ದಾರೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *