Breaking News

ಚಿತ್ರದುರ್ಗ ಶ್ರೀ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವುದನ್ನು ಖಂಡಿಸುತ್ತೇನೆ : ಬಸವಪ್ರಭು ಸ್ವಾಮಿ

ಚಿತ್ರದುರ್ಗ : ರಾಜ್ಯ ಸರ್ಕಾರವು ಬೆಳಗಾವಿಯ ಸುವರ್ಣಸೌಧ ಅಧಿವೇಶನದಲ್ಲಿ ಬಸವಣ್ಣನವರ ಭಾವಚಿತ್ರವನ್ನು ಅನಾವರಣಗೊಳಿಸಿರುವ ಮುಖ್ಯಮಂತ್ರಿಗಳ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.
ಆದರೆ ಚಿತ್ರದುರ್ಗ ಶ್ರೀ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವುದನ್ನು ಖಂಡಿಸುತ್ತೇನೆಂದು ಶ್ರೀ ಬಸವಪ್ರಭು ಸ್ವಾಮಿಗಳು ಹೇಳಿದರು.

ನಗರದ ಶ್ರೀ ಮುರುಘಾಮಠದ ಶಿರಸಂಗಿ ಮಹಾಲಿಂಗಸ್ವಾಮಿ ಸಭಾಂಗಣದಲ್ಲಿ ನಡೆದ ಮಠಾಧೀಶರ ಸಮಾಗಮ ಸಭೆಯಲ್ಲಿ ನೇತೃತ್ವ ವಹಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸರ್ಕಾರ ಮಠಗಳನ್ನು ನಿಯಂತ್ರಿಸಲು ಆಡಳಿತಾಧಿಕಾರಿ ನೇಮಕ ಮಾಡಿದ್ದು ಇದು ಮಠಗಳ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದೆ.

ಆಡಳಿತಾಧಿಕಾರಿ ನೇಮಕ ಮಾಡಲು ಸಂಸ್ಥೆಯಲ್ಲಿ ನೌಕರರ ಸಮಸ್ಯೆಗಳಿದ್ದಾಗ ಮಾತ್ರ ಅವಕಾಶವಿರುತ್ತದೆ. ಆದರೆ ಇಲ್ಲಿ ಯಾವ ನೌಕರರು ಸಹ ಸಂಬಳವಾಗಿಲ್ಲ ಎಂಬ ಸಮಸ್ಯೆ ತಂದು ಬೀದಿಗೆ ಬಂದಿಲ್ಲ. ಶ್ರೀಮಠದಲ್ಲಿ ಎಂದಿನಂತೆ ಪ್ರತಿದಿನ ಬಂದ ಭಕ್ತಾಧಿಗಳಿಗೆ ಅನ್ನದಾಸೋಹ, ಮಠದ ಅಭಿವೃದ್ಧಿ ಕಾರ್ಯಗಳು, ಬಸವಪುತ್ಥಳಿ ಮತ್ತು ಇತರೆ ಕಟ್ಟಡ ನಿರ್ಮಾಣ ಕಾರ್ಯಗಳು ಎಂದಿನಂತೆ ಪ್ರಗತಿಯಲ್ಲಿವೆ.

ಕರ್ನಾಟಕ ರಾಜ್ಯ ಉಚ್ಚನ್ಯಾಯಾಲಯದ ನಿರ್ದೇಶನದಂತೆ ಮುರುಘಾ ಶರಣರು ಜಿಪಿಎ ನೀಡಿರುತ್ತಾರೆ. ಜಿಪಿಎ ಹೊಂದಿರುವ ಕಾರ್ಯದರ್ಶಿ ಮತ್ತು ಸ್ವಾಮಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಆದರೂ ಸಹ ರಾಜ್ಯಸರ್ಕಾರ ಏಕಾಏಕಿ ಕೆಲವರ ಒತ್ತಡಕ್ಕೊಳಗಾಗಿ ಆಡಳಿತಾಧಿಕಾರಿ ನೇಮಕ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *