Breaking News

ಗ್ಯಾರೇಜಿಗೆ ಹಾನಿ; 13 ಮಂದಿಯ ವಿರುದ್ಧ ಪ್ರಕರಣ ದಾಖಲು

ಮೂಡುಬಿದಿರೆ: ಮಾರ್ಪಾಡಿ ಗ್ರಾಮದ ಹಳೆ ಪೊಲೀಸ್ ಠಾಣೆಯ ಬಳಿ ಇರುವ ಗ್ಯಾರೇಜಿಗೆ ಹಾನಿ ಮಾಡಿ, ಕೆಲಸದವರಿಗೆ ಬೆದರಿಕೆ ಒಡ್ಡಿ, ಜಾತಿ ನಿಂದನೆ ಮಾಡಿ, ನಗದು ಹಾಗೂ ಸೊತ್ತುಗಳನ್ನು ಒಯ್ದಿರುವ ದೂರಿನ ಮೇರೆಗೆ, ತೇಜಸ್ ಶೆಟ್ಟಿ, ಪೃಥ್ವಿರಾಜ್, ರಾಜೇಶ್ ಸಹಿತ 13 ಮಂದಿಯ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ಯಾರೇಜಿನಲ್ಲಿದ್ದ 22 ಸಾ. ರೂ. ಕಳವಾಗಿದ್ದು , ಒಟ್ಟು 50 ಸಾ. ರೂ. ನಷ್ಟ ಸಂಭವಿಸಿದೆ ಎಂದೂ ದೂರಿನಲ್ಲಿತಿಳಿಸಲಾಗಿದೆ. ಯಶೋಧರ ಮತ್ತು ಇತರರ ಮಾಲಕತ್ವದ ಗ್ಯಾರೇಜಿನಲ್ಲಿ ಮೆಕ್ಯಾನಿಕ್ ಪುಷ್ಪರಾಜ್ ಮತ್ತು ಇತರರು ಕೆಲಸ ಮಾಡುತ್ತಿದ್ದು, ಅವರೇ ಗ್ಯಾರೇಜನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ಅಂಗಡಿ ಕೋಣೆಯ ಬಗ್ಗೆ ಮೂಡುಬಿದಿರೆ ಸಿವಿಲ್ ಕೋರ್ಟಿನಲ್ಲಿ ದಾವೆ ಹೂಡಲಾಗಿದೆ. ಮೂಡುಬಿದಿರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಹಂಪಿ ಎಕ್ಸ್‌ಪ್ರೆಸ್ ರೈಲಿಗೆ ಆಕಸ್ಮಿಕ ಬೆಂಕಿ

ಬಳ್ಳಾರಿ : ಹಂಪಿ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಟು ಆತಂಕ ಸೃಷ್ಟಿಯಾದರೂ, ಅನಾಹುತ ಸಂಭವಿಸದೇ ಪ್ರಯಾಣಿಕರು ಪಾರಾದ …

Leave a Reply

Your email address will not be published. Required fields are marked *