‘ಗ್ರಾಹಕರಿಂದ ಸಾಲ ವಸೂಲಿ ಮಾಡಿ ಬ್ಯಾಂಕ್‌ಗೆ ಸಂದಾಯ ಮಾಡದೆ ತಲೆ ಮರೆಸಿಕೊಂಡಿದ್ದ ಬ್ಯಾಂಕ್ ಸಿಬ್ಬಂದಿಯನ್ನು ಶನಿವಾರ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ನಗರ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ತಾಜ್ ಉದ್ದಿನ್ ತಿಳಿಸಿದ್ದಾರೆ. ನಗರದ ಖಾಸಗಿ ಬ್ಯಾಂಕ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಾಲ್ಲೂಕಿನ ಗೌರಿಪುರ ಗ್ರಾಮದ ನಿವಾಸಿ ಸುವಾಸ್ ಬಂಧಿತ ಆರೋಪಿ. ಬ್ಯಾಂಕ್‌ನಲ್ಲಿ ಸಾಲ ಪಡೆದ ಗ್ರಾಹಕರಿಂದ ಸಾಲ ವಸೂಲಿ ಮಾಡಿ ಖಾತೆಗೆ ಸಂದಾಯ ಮಾಡುವ ಕೆಲಸಕ್ಕೆ ನಿಯೋಜನೆಗೊಂಡಿದ್ದ ಆತ, ಇತ್ತೀಚೆಗೆ 50 ಗ್ರಾಹಕರಿಂದ ಸಂಗ್ರಹಿಸಿದ್ದ ₹ 1,72,200 ಗ್ರಾಹಕರ ಖಾತೆಗೆ ಪಾವತಿಸದೆ ತಲೆ ಮರೆಸಿಕೊಂಡಿದ್ದ. ಬ್ಯಾಂಕ್ ವ್ಯವಸ್ಥಾಪಕರ ದೂರಿನಂತ, ಸರ್ಕಲ್ ಇನ್‌ಸ್ಪೆಕ್ಟರ್ ಸಂತೋಷ್ ಕಶ್ಯಪ್ ನೇತೃತ್ವದಲ್ಲಿ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ತಿಳಿಸಿದರು. ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಎಚ್.ಸಿ.ಅರುಣ್, ರಾಜರತ್ನಂ ಮತ್ತು ಅರುಣ್ ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

