ಧಾರವಾಡ : ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹಾಗೂ ಸಾರ್ವಜನಿಕರ ಮಧ್ಯೆ ಜಟಾಪಟಿ ನಡೆದಿದೆ. ಬಸ್ ನಿಲ್ದಾಣದಲ್ಲಿ ಸುಲಭ ಶೌಚಾಲಯವಿದ್ದರೂ ಕಂಪೌಂಡ್ ಬಳಿ ಸಾರ್ವಜನಿಕರೊಬ್ಬರು ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಆ ವ್ಯಕ್ತಿಯ ಕೊರಳಪಟ್ಟಿ ಹಿಡಿದು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಎಳೆದಾಡಿದ್ದಾರೆ.

100 ರೂಪಾಯಿ ದಂಡ ಕಟ್ಟುವಂತೆ ಆ ವ್ಯಕ್ತಿಯನ್ನು ಸಿಬ್ಬಂದಿ ಎಳೆದುಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂತು. ಇಬ್ಬರೂ ಕೈಕೈ ಕೂಡ ಮಿಲಾಯಿಸಿದ್ದರು. ಕೆಲ ಮಹಿಳೆಯರೊಂದಿಗೂ ಸಿಬ್ಬಂದಿ ಇದೇ ರೀತಿ ವರ್ತನೆ ಮಾಡಿದ್ದಾರೆ ಎಂದು ಗೊತ್ತಾಗಿದೆ. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕಿದ್ದ ಸಿಬ್ಬಂದಿ ಈ ರೀತಿ ಕೈಕೈ ಮಿಲಾಯಿಸಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





