ನಿನ್ನೆ ಅಂಧಾಭಿಮಾನದಿಂದ ಕೆಲವರು ಕುರಿ ಬಲಿಕೊಟ್ಟು ದಿ ವಿಲನ್’ ಪೋಸ್ಟರ್ಗೆ ರಕ್ತಾಭಿಷೇಕ ಮಾಡಿದ್ದರು. ಶಿಕಾರಿಪುರದ ಮಾಲತೇಶ ಚಿತ್ರಮಂದಿರದ ಎದುರು ಫ್ಯಾನ್ಸ್ ಇಂತಹ ವಿಲಕ್ಷಣ ಕೃತ್ಯ ಎಸಗಿದ್ದರು. ಈ ಘಟನೆ ಮರೆಯುವ ಮೊದಲೇ ಮತ್ತೊಂದು ಘಟನೆ ವರದಿಯಾಗಿದೆ. ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಕೋಣದ ಮರಿ ಕಡಿದು ಅಂದಾಭಿಮಾನ ಮೆರೆದಿದ್ದಾರೆ.ನಿರ್ದೇಶಕರ ಮನವಿಗೂ ಕರಗದ ಜನ..!ದಿ ವಿಲನ್’ ಸಿನಿಮಾಗಾಗಿ ಪ್ರಾಣಿ ಬಲಿ ನೀಡ್ತಿರೋದನ್ನು ನಿರ್ದೇಶಕ ಜೋಗಿ ಪ್ರೇಮ್ ಖಂಡಿಸಿದ್ದರು. ಇಂತಹ ಅಂದಾಭಿಮಾನ ಬೇಡ ಅಂತಾ ಮನವಿ ಮಾಡಿದ್ದರು. ಆದರೆ ಕೆಲವರು ಮತ್ತೆ ಇಂತಹ ಕೃತ್ಯ ಎಸಗುತ್ತಿದ್ದಾರೆ. ಜಗಳೂರಿನಲ್ಲಿ ನೂರಾರು ಜನರ ಎದುರು ಕೋಣದ ಮರಿ ಕಡಿಯಲಾಗಿದೆ. ಕೋಣವನ್ನು ಎತ್ತಿ ಬಿಸಾಡಿ ಚಿತ್ರ ಹಿಂಸೆ ನೀಡಿದ್ದಾರೆ. ಅಲ್ಲದೇ ಉದ್ದದ ಮಚ್ಚಿನಿಂದ ಕಡಿಯುವುದನ್ನು ಚಿತ್ರೀಕರಿಸಿ ಅಮಾನವೀಯತೆ ತೋರಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





