Breaking News

ಬೆಂಗಳೂರಲ್ಲಿ ಬರ್ತ್ಡೇ ಪಾರ್ಟಿಗಾಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸುಲಿಗೆ : ಐವರು ಆರೋಪಿಗಳು ಅರೆಸ್ಟ್!

ಬರ್ತಡೇ ಪಾರ್ಟಿ ಆಚರಣೆಗಾಗಿ ದರೋಡೆ ಮಾಡಿದ ಐವರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ದರೋಡೆ ಮಾಡಿದ್ದ ಐವರನ್ನು ಇದೀಗ ಬಂಧಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೋಲಿಸರಿಂದ ಕಾರ್ಯಾಚರಣೆ ನಡೆದಿದೆ. ಮುನೇಗೌಡ, ಆನಂದ, ಗಗನ, ತಿಲಕ್ ಮತ್ತು ಆಕಾಶ್ ಬಂದಿದ ಆರೋಪಿಗಳು ಎಂದು ತಿಳಿದುಬಂದಿದೆ. ನಾಗದೇವ ಹಳ್ಳಿಯ ಗೀತಂ ವಿಶ್ವವಿದ್ಯಾಲಯ ಬಳಿ ವಿದ್ಯಾರ್ಥಿಗಳನ್ನು ಬೆದರಿಸಿ ದರೋಡೆ ಮಾಡಿದ್ದರು. ದೊಡ್ಡಬಳ್ಳಾಪುರದ ಹರವಲಯದಲ್ಲಿರುವ ಗೀತಂ ವಿಶ್ವವಿದ್ಯಾಲಯದ ಬಳಿ ವಿದ್ಯಾರ್ಥಿಗಳನ್ನು ಬೆದರಿಸಿ ಸುಲಿಗೆ ಮಾಡಿದ್ದರು. ಆನಂದನ ಬರ್ತಡೆ ಪಾರ್ಟಿ ಮಾಡಲು ಈ ಒಂದು ಗ್ಯಾಂಗ್ ದರೋಡೆ ಮಾಡಿತ್ತು. ಪಿಜಿ ಮೇಲೆ ಹಲ್ಲೆ ನಡೆಸಿ ಫೋನ್ ಪೇ ಮೂಲಕ ಹಣ ಸುಲಿಗೆ ಮಾಡಿದ್ದಾರೆ. ಹಲ್ಲೆಗೆ ಒಳಗಾದ ಬಿಇ ವಿದ್ಯಾರ್ಥಿಗಳು ನೀಡಿದ ದೂರಿನ ಮೇರೆಗೆ ಕೇಸ್ ದಾಖಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಂತರ ಠಾಣೆ ಪೋಲಿಸರು ಪ್ರಕರಣದ ಕಲಿಸಿಕೊಂಡು ಐವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Share News

About BigTv News

Check Also

80s ಫೋಟೋ ಟ್ರೆಂಡ್‌ನಲ್ಲೂ ಸೈಬರ್ ವಂಚಕರ ಕನ್ನ: ಹಣ ಕೊಡದಿದ್ದಕ್ಕೆ ಬೆತ್ತಲೆ ಫೋಟೋ ಹರಿಬಿಟ್ಟ ವಂಚಕರು

ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆಯ ವಿನೋದ್ (45) ಎಂಬುವರು 80ರ ದಶಕದ ಶೈಲಿಯಲ್ಲಿ ಫೋಟೋ ಎಡಿಟ್ ಮಾಡಲು ನಕಲಿ ಆ್ಯಪ್ …

Leave a Reply

Your email address will not be published. Required fields are marked *