Breaking News

ಕುಡಿದ ಮತ್ತಿನಲ್ಲಿ ಶುರುವಾದ ಕಿರಿಕ್‌ ಕೊ*ಲೆಯಲ್ಲಿ ಅಂತ್ಯ..!

ಆನೇಕಲ್ : ಕುಡಿದ‌ ಮತ್ತಿನಲ್ಲಿ ಕೂಲಿ ಕಾರ್ಮಿಕರ ನಡುವೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಯಾರಂಡಹಳ್ಳಿಯ ಆರ್.ಕೆ.ಟೌನ್ ಶಿಪ್ ಬಳಿ ನಡೆದಿದೆ. ಒರಿಸ್ಸಾ ಮೂಲದ ಸುನೀಲ್ (45) ಹತ್ಯೆಯಾದ ವ್ಯಕ್ತಿ. ರಾತ್ರಿ ಸಹ ಕಾರ್ಮಿಕರೊಟ್ಟಿಗೆ ಕುಳಿತು ಮದ್ಯ ಸೇವಿಸಿದ ನಂತರ ಕಿರಿಕ್ ನಡೆದು, ಅದು ವಿಕೋಪಕ್ಕೆ ತಿರುಗಿದೆ. ಸುನೀಲ್ ಕುಡಿತದ ದಾಸನಾಗಿದ್ದ. ನಿರ್ಮಾಣ ಹಂತದ ಕಟ್ಟಡದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಆರೋಪಿಗಳು ಈತನನ್ನು ಕೊಲೆ ಮಾಡಿ, ಗೋಣಿ ಚೀಲದಲ್ಲಿ ಹಾಕಿ ಪೊದೆಯೊಂದರಲ್ಲಿ ಎಸೆದಿದ್ದರು. ಸಾರ್ವಜನಿಕರು ಪೊದೆ ಬಳಿ ರಕ್ತಸಿಕ್ತದ ಚೀಲ ಗಮನಿಸಿ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಬ್ಬಗೋಡಿ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *