Breaking News

ಮಾರಕಾಸ್ತ್ರಗಳಿಂದ ದಾಳಿ ಮಾಡಿ ನಗರಸಭೆ ಸದಸ್ಯನ ಹತ್ಯೆಗೆ ಯತ್ನ, ಕಾರ್ ಜಖಂ

ರಾಮನಗರ: ಹಳೆ ದ್ವೇಷದ ಹಿನ್ನೆಲೆಯಲ್ಲಿ ನಗರಸಭೆ ಸದಸ್ಯನ ಹತ್ಯೆಗೆ ಯತ್ನಿಸಲಾಗಿದೆ. ದಾಳಿಯ ವೇಳೆ ರಾಮನಗರ ನಗರಸಭೆಯ 22ನೇ ವಾರ್ಡ್ ಸದಸ್ಯ ಅಜ್ಮತ್ ಉಲ್ಲಾ ಖಾನ್ ಪಾರಾಗಿದ್ದಾರೆ. ರಾಮನಗರದ ರೈಲ್ವೆ ಅಂಡರ್ ಪಾಸ್ ಬಳಿ ಘಟನೆ ನಡೆದಿದೆ. ಅಜ್ಮತ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಹತ್ಯೆಗೆ ಯತ್ನಿಸಿದ್ದು, ಅದೃಷ್ಟವಶಾತ್ ಅವರು ಪಾರಾಗಿದ್ದಾರೆ. ನಂತರ ಅವರ ಮನೆಯ ಬಳಿ ಹೋದ. ಮೂವರು ಯುವಕರು ದಾಂದಲೆ ಮಾಡಿದ್ದಾರೆ. ಲಾಂಗ್, ಮಚ್ಚು ಹಿಡಿದು ಅಜ್ಮತ್ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದಾರೆ. ಮನೆ ಬಳಿ ಇದ್ದ ಕಾರ್ ಜಖಂಗೊಳಿಸಿದ್ದಾರೆ. ರಾಮನಗರದ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Share News

About BigTv News

Check Also

ಪೊಲೀಸರ ಮೇಲೆಯೇ ಹಲ್ಲೆ ಆರೋಪ.. ಗಂಟೆಗಳು ಕಳೆದರೂ FIR ಇಲ್ಲ!

ಪೊಲೀಸರ ಮೇಲೆಯೇ ಕೈ ಎತ್ತಿದ ಪುಂಡರು.. ಪ್ರಕರಣ ದಾಖಲಿಸಲು ಪೊಲೀಸರಿಗೆ ಇಷ್ಟೊಂದು ವಿಳಂಬವೇಕೆ…? ಪೊಲೀಸರ ಮೇಲೆಯೇ ಹಲ್ಲೆ ಮಾಡುವಷ್ಟು ಬೆಳೆದ …

Leave a Reply

Your email address will not be published. Required fields are marked *