Breaking News

ಜಾತಿ ನಿಂದನೆ: 1 ವರ್ಷ ಜೈಲು

ತುಮಕೂರು: ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿ, ಅಂಗಡಿ ಸಾಮಗ್ರಿ ಹಾಳು ಮಾಡಿದ್ದ ಅಪರಾಧಿ ವಿನಯ್‌ ಕುಮಾರ್‌ ಎಂಬಾತನಿಗೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ 1 ವರ್ಷ ಜೈಲು ಶಿಕ್ಷೆ, ₹1 ಸಾವಿರ ದಂಡ ವಿಧಿಸಿದೆ. ತಿಪಟೂರು ನಗರದಲ್ಲಿ ಕೆ.ಎನ್‌.ಜಯಸಿಂಹ ಎಂಬುವರು ತಳ್ಳುವ ಗಾಡಿಯಲ್ಲಿ ಚಿಲ್ಲರೆ ವ್ಯಾಪಾರ ನಡೆಸಿಕೊಂಡಿದ್ದರು. ತಳ್ಳುವ ಗಾಡಿಗೆ ಮಹರ್ಷಿ ವಾಲ್ಮೀಕಿ, ಕನ್ನಡವೇ ಸತ್ಯ-ಕನ್ನಡವೇ ನಿತ್ಯ, ವಂದೇ ಮಾತರಂ ಎಂದು ಬರೆಸಿದ್ದರು. 2015ರ ಏ. 23ರಂದು ಬರಹದ ಮೇಲೆ ವಿನಯ್‌ ಮೂತ್ರ ವಿಸರ್ಜನೆ ಮಾಡಲು ಮುಂದಾಗಿದ್ದರು. ಇದನ್ನು ಪ್ರಶ್ನಿಸಿದ ಜಯಸಿಂಹ ವಿರುದ್ಧ ಹಲ್ಲೆ ನಡೆಸಿದ್ದರು. ತಿಪಟೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಿವೈಎಸ್‌ಪಿ ಕೆ.ಪಿ.ರವಿಕುಮಾರ್‌ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶರಾದ ಎ.ನಾಗಿರೆಡ್ಡಿ ಪ್ರಕರಣದ ಕುರಿತು ವಿಚಾರಣೆ ನಡೆಸಿ, ಅಪರಾಧಿಗೆ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಬಿ.ಎಸ್.ಜ್ಯೋತಿ ವಾದ ಮಂಡಿಸಿದ್ದರು.

Share News

About BigTv News

Check Also

ಜೊಂಬಿ ಡ್ರಗ್ಸ್ ಸುಳ್ಳು ಸುದ್ದಿ, ವಿಡಿಯೋ ವೈರಲ್ ಮಾಡಿದವನನ್ನ ಅರೆಸ್ಟ್ ಮಾಡಲಾಗಿದೆ : ಜಿ.ಪರಮೇಶ್ವರ್

ಬೆಂಗಳೂರು : ಜೊಂಬಿ ಡ್ರಗ್ಸ್ ಸೇವಿಸುತ್ತಿದ್ದ ಎಂಬ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಮಿಷನರ್ ರಿಂದ ಪ್ರಕರಣದ ಬಗ್ಗೆ ಮಾಹಿತಿ …

Leave a Reply

Your email address will not be published. Required fields are marked *