ಶಿವಮೊಗ್ಗ : ನಗರದ ತುಂಗಾನಗರ ಸಮೀಪದ ಕಾಮತ್ ಲೇಔಟ್‌ನ ತೋಟವೊಂದರ ಬಳಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿರುವ ಘಟನೆ ನಡೆದಿದೆ. ಮೇಲಿನ ತುಂಗಾನಗರ ನಿವಾಸಿ ಮಂಜುನಾಥ್ (24) ಮೃತಪಟ್ಟವರು ಎಂದು ತಿಳಿದು ಬಂದಿದೆ. ಮಂಜುನಾಥ್ ಅಡಿಕೆ ಆರಿಸುವ ಹಾಗೂ ಮೂಟೆ ಹೊರುವ ಕೆಲಸ ಮಾಡುತ್ತಿದ್ದರು. ಒಂದು ತಿಂಗಳ ಹಿಂದಷ್ಟೇ ಕೆಲಸ ಬಿಟ್ಟು ಮನೆಯಲ್ಲಿದ್ದರು. ಬುಧವಾರ ಬೆಳಗ್ಗೆ ಕೆಲಸದ ನಿಮಿತ್ತ ಮನೆಯಿಂದ ಹೊರಹೋದವರು ಗುರುವಾರ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನೆಯ ಕುರಿತಾಗಿ ಮಂಜುನಾಥ್ ಅಕ್ಕ ಲಕ್ಷ್ಮೀದೇವಿ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ತಮ್ಮನ ಸಾವಿಗೆ ಆತನ ಗೆಳೆಯ ಸಂತೋಷ್ ಕಾರಣ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಮಂಜುನಾಥ್ ಬಳಿ ಸುಮಾರು 20ರಿಂದ 30 ಸಾವಿರ ಹಣವಿದ್ದು, ಅದನ್ನು ಖರ್ಚು ಮಾಡಿಸುವ ಉದ್ದೇಶದಿಂದ ಆತನ ಗೆಳೆಯ ಸಂತೋಷ್ ಬುಧವಾರ ಬೆಳಗ್ಗೆ ಮನೆಗೆ ಬಂದು ಆತನನ್ನು ಕರೆದುಕೊಂಡು ಹೋಗಿದ್ದನು ಎಂದು ಅವರು ಆರೋಪಿಸಿದ್ದಾರೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ನಾಪತ್ತೆಯಾಗಿರುವ ಸಂತೋಷ್ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

