Breaking News

ಬಾರ್ ನಲ್ಲಿ ಜಗಳ ಬಿಡಿಸಲು ಹೋದವನಿಗೆ ಚಾಕುವಿನಿಂದ ಹಲ್ಲೆ

ಶಿವಮೊಗ್ಗದ ರಾಗಿಗುಡ್ಡ ಸಮೀಪ ಹೊನ್ನಾಳಿ ರಸ್ತೆಯ ವೈನ್ ಸ್ಟೋರ್ ವೊಂದರಲ್ಲಿ ಜಗಳ ಬಿಡಿಸಲು ಹೋದ ಯುವಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ರಾಗಿಗುಡ್ಡ ನಿವಾಸಿ ಸುನಿಲ್ ಕುಮಾರ್(27) ಹಲ್ಲೆಗೊಳಗಾಗಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುನಿಲ್ ತಮ್ಮ ಸ್ನೇಹಿತ ರಘು ಜೊತೆಗೆ ಮದ್ಯಪಾನ ಮಾಡಲು ಹೋಗಿದ್ದರು. ಈ ವೇಳೆ ಅಲ್ಲೇ ಕುಳಿತಿದ್ದ ವ್ಯಕ್ತಿಯೊಬ್ಬ ತನ್ನ ಸ್ನೇಹಿತರೊಂದಿಗೆ ಜಗಳವಾಡುತ್ತಿದ್ದ. ಇದನ್ನು ಗಮನಿಸಿದ ಸುನಿಲ್ ಗಲಾಟೆ ಮಾಡದಂತೆ ತಿಳಿ ಹೇಳಲು ಹೋದಾಗ ಆಕ್ರೋಶಗೊಂಡ ವ್ಯಕ್ತಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಸುನಿಕ್ ಕುಮಾರ್ ತಲೆ, ಮುಖ, ಕತ್ತಿನ ಭಾಗಕ್ಕೆ ತೀವ್ರ ಗಾಯಗಳಾಗಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *