Breaking News

ಮೈಸೂರು : ಪತ್ನಿ, ಪುತ್ರನಿಗೆ ಗುಂಡಿಕ್ಕಿ ಉದ್ಯಮಿ ಹರ್ಷವರ್ಧನ ಕಿಕ್ಕೇರಿ ಆತ್ಮಹತ್ಯೆ!!

ಉದ್ಯಮಿ ಹರ್ಷವರ್ಧನ ಕಿಕ್ಕೇರಿ (57) ಅಮೆರಿಕದ ವಾಷಿಂ‌ಗ್ಟನ್ ಸಮೀಪದ ನ್ಯೂ ಕ್ಯಾಸೆಲ್‌ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಪತ್ನಿ ಶ್ವೇತಾ ಹಾಗೂ ಪುತ್ರನಿಗೆ ಗುಂಡಿಕ್ಕಿ, ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಅಮೆರಿಕ ಕಾಲಮಾನದ ಪ್ರಕಾರ ಗುರುವಾರ ರಾತ್ರಿ ಅನಾಹುತ ಸಂಭವಿಸಿದ್ದು, ಕೃತ್ಯಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.ಹರ್ಷ ತಮ್ಮ ಪತ್ನಿ ಶ್ವೇತಾ, ಇಬ್ಬರು ಪುತ್ರರೊಂದಿಗೆ ಅಮೆರಿಕದ ನ್ಯೂ ಕ್ಯಾಸಲ್‌ನಲ್ಲಿ ವಾಸವಿದ್ದರು. ಗುರುವಾರ ರಾತ್ರಿ ಹರ್ಷ, ಪತ್ನಿ ಹಾಗೂ ಹಿರಿಯ ಪುತ್ರನಿಗೆ ಗುಂಡಿಕ್ಕಿ, ನಂತರ ತಾವೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ವೇಳೆ ಏಳು ವರ್ಷದ ಕಿರಿಯ ಪುತ್ರ ಮನೆಯಿಂದ ಹೊರಹೋಗಿದ್ದರಿಂದ ಎಂಬುದು ತಿಳಿದುಬಂದಿದೆ. ಬದುಕುಳಿದಿದ್ದಾನೆ.ಕಿಂಗ್ ಕೌಂಟಿ ಶೆರಿಫ್ ಕಚೇರಿ (KCSO) ಪ್ರಕಾರ, ಈ ಘಟನೆ ವಾಷಿಂಗ್ಟನ್‌ನ ನ್ಯೂಕ್ಯಾಸಲ್‌ನಲ್ಲಿರುವ ಟೌನ್‌ಹೋಮ್‌ನಲ್ಲಿ ಸಂಭವಿಸಿದೆ.

Share News

About BigTv News

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *