Breaking News

ಶಿಸ್ತು, ಸಂಯಮ, ಕಾರ್ಯಪ್ರವೃತ್ತತೆ ಬಗ್ಗೆ ವಿವೇಚನೆ ಮೂಡಿಸುವದೇ ಎನ್.ಎಸ್.ಎಸ್ ಮುಖ್ಯ ಉದ್ದೇಶ…

ಕುಂದಗೋಳ : ಶಿಸ್ತು, ಸಂಯಮ, ಕಾರ್ಯಪ್ರವೃತ್ತತೆ ಬಗ್ಗೆ ವಿವೇಚನೆ ಮೂಡಿಸುವದೇ ಎನ್.ಎಸ್.ಎಸ್ ಮುಖ್ಯ ಉದ್ದೇಶ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಹೇಳಿದರು.

ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಭಾನುವಾರ ಸಂಶಿ ಕೆಎಲ್ಇ ಕಾಲೇಜು ವಿದ್ಯಾರ್ಥಿಗಳ ಎನ್ಎಸ್‌ಎಸ್‌ ಶಿಬಿರಕ್ಕೆ ಅವರು ಚಾಲನೆ ನೀಡಿ ಮಾತನಾಡಿ ಮಹಾತ್ಮ ಗಾಂಧಿ ಅವರ ಕನಸಿನ ಕೂಸಾದ ಎನ್ಎಸ್ಎಸ್ ಶಿಬಿರದಿಂದ ವಿದ್ಯಾರ್ಥಿಗಳಿಗೆ ಅನೇಕ ಪ್ರಯೋಜನ ಸಿಗಲಿದ್ದು, ಸೇವಾ ಮನೋಭಾವ ಬೆಳೆಸುವ ಸುಗಮ ದಾರಿಯಾಗಿದೆ ಎಂದು ವಿವರಿಸಿದರು.

ಜಿಲ್ಲಾ ಕಸಾಪ ಗೌ.ಕಾರ್ಯದರ್ಶಿ ಪ್ರೋ. ಕೆ.ಎಸ್.ಕೌಜಲಗಿ ಅವರು ಮಾತನಾಡಿ ಭಾರತ ಹಳ್ಳಿಗಳಿಂದ ಕೂಡಿದ ರಾಷ್ಟ್ರ. ಆದರೆ ಸರ್ಕಾರಗಳು ಹಳ್ಳಿಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವದರಿಂದ ಹಳ್ಳಿಗಳು ಉದ್ಧಾರವಾಗಲು ಸಾಧ್ಯವಿಲ್ಲ. ಹಾಗಾಗಿ ಹಳ್ಳಿಗಳ ಜನತೆ ಸರ್ಕಾರಗಳನ್ನು ಪ್ರಶ್ನಿಸುವಂತಾಗಬೇಕು ಎಂದು ಗ್ರಾಮಸ್ಥರಿಗೆ ಕಿವಿಮಾತು ಹೇಳಿದರು.

Share News

About BigTv News

Check Also

ಧಾರವಾಡದಲ್ಲಿ ದಾಳಿ ದಂಧೆ!ಯುವ ಕಾಂಗ್ರೆಸ್ ಮುಖಂಡ ಪೈರೋಜ್‌ಖಾನ ಪಠಾಣ ಮನೆಗೆ ನುಗ್ಗಿ ಹತ್ಯೆ…

Big Breaking:ಮನೆಯೊಳಗೆ ನುಗ್ಗಿ ಯುವ ಕಾಂಗ್ರೆಸ್ ನಾಯಕರ ಕೊಲೆ – ಧಾರವಾಡದಲ್ಲಿ ಆತಂಕ ಧಾರವಾಡ: ನಗರದಲ್ಲಿ ಬೆಚ್ಚಿಬೀಳಿಸುವ ಬರ್ಬರ ಹತ್ಯೆ …

Leave a Reply

Your email address will not be published. Required fields are marked *